ಇಲ್ಲಿದೆ ತೂಕ ಇಳಿಸಿಕೊಳ್ಳಲು ಸರಳ ʼವ್ಯಾಯಾಮʼ

ಒಂದೇ ವಾರದಲ್ಲಿ ತೂಕ ಕಳೆದುಕೊಳ್ಳಬೇಕೇ? ಹಾಗಿದ್ದರೆ ಇಲ್ಲೊಂದಿಷ್ಟು ಸರಳ ವ್ಯಾಯಾಮಗಳಿವೆ. ಮನೆಯಲ್ಲಿ ಸಮಯ ಸಿಕ್ಕಾಗ ಇದನ್ನು ಮಾಡುತ್ತಿದ್ದರೆ ಸಾಕು, ನಿಮ್ಮ ದೇಹದ ತೂಕ ಕಡಿಮೆಯಾಗುವುದು ಖಂಡಿತ.

ವೇಗವಾಗಿ ಉಸಿರಾಡುತ್ತಾ ನಿಮ್ಮ ಹೊಟ್ಟೆಯನ್ನು ಒಳಗೆ ಹೊರಗೆ ಎಳೆದು ಬಿಡಿ. ಇದರಿಂದ ನಿಮ್ಮ ಹೊಟ್ಟೆಯ ಸ್ನಾಯುಗಳಿಗೆ ವ್ಯಾಯಾಮ ಸಿಗುತ್ತದೆ.
ಅಕ್ಕಿ ಹಿಟ್ಟನ್ನು ಬೀಸುವಂತೆ ಕುಳಿತು ನಿಮ್ಮ ದೇಹವನ್ನು ಸುತ್ತಲೂ ತಿರುಗಿಸಿ. ಸಾಧ್ಯವಾದಷ್ಟು ಬೆನ್ನನ್ನು ಹಿಂದಕ್ಕೆ ಬಗ್ಗಿಸಿ.

ನೇರವಾಗಿ ಮಲಗಿ ನಿಮ್ಮ ಕಾಲುಗಳನ್ನು 90 ಡಿಗ್ರಿಗೆ ಮೇಲಕ್ಕೆತ್ತಿ ಕೆಳಗೆ ಮಾಡಿ. ಕೈಗಳನ್ನು ನೇರವಾಗಿಟ್ಟು 45 ಡಿಗ್ರಿಗೆ ಕಾಲನ್ನು ಮೇಲಕ್ಕೆತ್ತಿ 10 ಸೆಕೆಂಡ್ ಹಾಗೆ ಉಳಿಸಿ ಮತ್ತೆ ನಿಧಾನಕ್ಕೆ ಕೆಳಗಿಳಿಸಿ.

ಕಾಲನ್ನು ಮೇಲಕ್ಕಿಂಟುಕೊಂಡಾಗ ತಲೆಯನ್ನು ಮೇಲಕ್ಕೆತ್ತಿ. ಇದರಿಂದ ಹೊಟ್ಟೆಯ ಭಾಗದ ಕೊಬ್ಬು ಹಾಗೂ ತೊಡೆಗಳಿಗೆ ವ್ಯಾಯಾಮ ದೊರೆಯುತ್ತದೆ. ಒಂದೊಂದು ಕಾಲನ್ನು ವೃತ್ತಾಕಾರದಲ್ಲಿ ತಿರುಗಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read