ಉಳುಕಿನ ನೋವು ನಿವಾರಿಸಲು ಇಲ್ಲಿದೆ ‘ಮನೆ ಮದ್ದು’

ನಡೆಯುವಾಗ ಅಥವಾ ಓಡುವಾಗ ಕಾಲು ಉಳುಕುವುದು ಸಾಮಾನ್ಯ ಸಂಗತಿ. ಕಾಲು ಯಾವಾಗ ಉಳುಕುತ್ತೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಉಳುಕು ಕಣ್ಣಿಗೆ ಕಾಣದ ಬೇನೆ. ಕೆಲವರಿಗ ಊದಿಕೊಂಡು ಕೆಂಪಾದ್ರೆ ಮತ್ತೆ ಕೆಲವರಿಗೆ ಬರಿ ನೋವಷ್ಟೆ ಕಾಣಿಸಿಕೊಳ್ಳುತ್ತದೆ. ಆ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು. ನಾಲ್ಕೈದು ದಿನ ಬೆಂಬಿಡದೆ ಕಾಡುವ ಈ ನೋವನ್ನು ಮನೆ ಮದ್ದಿನ ಮೂಲಕ ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು.

ಮಂಜುಗಡ್ಡೆ : ಕಾಲು ಉಳುಕಿದ ತಕ್ಷಣ ಮಂಜುಗಡ್ಡೆಯನ್ನು ಕಾಲಿನ ಮೇಲೆ ಇಟ್ಟುಕೊಳ್ಳಿ. ಇದ್ರಿಂದ ಕಾಲು ಊದಿಕೊಳ್ಳುವುದಿಲ್ಲ. ಹಾಗೆ ನೋವು ಕಡಿಮೆಯಾಗುತ್ತದೆ. ಮಂಜುಗಡ್ಡೆಯನ್ನು 1-2 ಗಂಟೆ ಬಿಟ್ಟು 20 ನಿಮಿಷ ಇಟ್ಟುಕೊಳ್ಳಿ.

ಅರಿಶಿನ : ಅರಿಶಿನ ಹಚ್ಚುವುದರಿಂದ ಕಾಲು ಊದಿಕೊಳ್ಳುವುದಿಲ್ಲ. 2 ಚಮಚ ಅರಿಶಿನಕ್ಕೆ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ. ಇದನ್ನು ಸ್ವಲ್ಪ ಬಿಸಿ ಮಾಡಿ ಉಳುಕಿದ ಜಾಗಕ್ಕೆ ಹಚ್ಚಿಕೊಳ್ಳಿ. ಎರಡು ಗಂಟೆ ಬಿಟ್ಟು ಬಿಸಿ ನೀರಿನಲ್ಲಿ ಕಾಲನ್ನು ತೊಳೆದುಕೊಳ್ಳಿ.

ಜೇನು ತುಪ್ಪ ಹಾಗೂ ಸುಣ್ಣ : ಜೇನುತುಪ್ಪ ಹಾಗೂ ಸುಣ್ಣವನ್ನು ಸರಿ ಪ್ರಮಾಣದಲ್ಲಿ ತೆಗೆದುಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಉಳುಕಿರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿಕೊಳ್ಳಿ. ಕೆಲವೇ ಗಂಟೆಯಲ್ಲಿ ನಿಮಗೆ ಆರಾಮ ಸಿಗುತ್ತದೆ.

ಅಲೋವೇರಾ : ಅಲೋವೇರಾದಲ್ಲಿ ಸಾಕಷ್ಟು ಔಷಧಿ ಗುಣಗಳಿವೆ. ಇದ್ರ ಪರಿಣಾಮ ಕೂಡ ಬೇಗ ಗೊತ್ತಾಗುತ್ತದೆ. ಉಳುಕಿದ ಜಾಗದಲ್ಲಿ ಅಲೋವೇರಾ ಹಚ್ಚಿ. ಸ್ವಲ್ಪ ಹೊತ್ತಿನಲ್ಲಿಯೇ ನೆಮ್ಮದಿ ಸಿಗಲಿದೆ.

ವೀಳ್ಯದೆಲೆ : ವೀಳ್ಯದೆಲೆ ಉಳುಕಿನ ಸಮಸ್ಯೆಗೆ ಬಹಳ ಉತ್ತಮ. ಹಾಗಾಗಿ ಸಾಸಿವೆ ಎಣ್ಣೆಗೆ ವೀಳ್ಯದೆಲೆ ಹಾಕಿ ಸ್ವಲ್ಪ ಬಿಸಿ ಮಾಡಿ ನಂತ್ರ ಉಳುಕಿದ ಜಾಗಕ್ಕೆ ಹಚ್ಚಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read