ಖಾಸಗಿ ಭಾಗದ ತುರಿಕೆ ಕಿರಿಕಿರಿಗೆ ಇಲ್ಲಿದೆ ʼಮನೆ ಮದ್ದುʼ

ಮಹಿಳೆಯರ ಖಾಸಗಿ ಭಾಗದಲ್ಲಿ ಸಮಸ್ಯೆ ಕಾಣಿಸಿಕೊಳ್ಳೋದು ಸಹಜ. ಅನೇಕ ಬಾರಿ ಈ ವಿಷ್ಯವನ್ನು ಮಹಿಳೆಯರು ಯಾರ ಬಳಿಯೂ ಹೇಳುವುದಿಲ್ಲ. ಹಾಗೆ ಮಾಡಿದಾಗ ಸಮಸ್ಯೆ ಜಾಸ್ತಿಯಾಗುತ್ತದೆ.

ಮನೆಯಿಂದ ಹೊರಗೆ ಹೋದಾಗ ಸಾಕಷ್ಟು ಕಿರಿಕಿರಿಯಾಗುತ್ತದೆ. ಬೇರೆಯವರ ಮುಂದೆ ಮುಜುಗರಪಟ್ಟುಕೊಳ್ಳುವ ಸ್ಥಿತಿ ಕೂಡ ನಿರ್ಮಾಣವಾಗುತ್ತದೆ. ಹುಡುಗಿಯರು ವೈದ್ಯರ ಬಳಿ ಹೋಗಲು ನಾಚಿಕೆಪಡ್ತಾರೆ. ಅಂತವರು ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಸಿ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದಾಗಿದೆ.

ಖಾಸಗಿ ಭಾಗಗಳ ತುರಿಕೆಯನ್ನು ತಪ್ಪಿಸಲು ಆಪಲ್ ಸೈಡರ್ ವಿನೆಗರ್ ಬಹಳ ಒಳ್ಳೆಯದು. ಬೆಚ್ಚಗಿನ ನೀರಿಗೆ ಎರಡು ಚಮಚ ಆಪಲ್ ಸೈಡರ್ ವಿನೆಗರ್ ಹಾಕಿ ಖಾಸಗಿ ಭಾಗವನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ದಿನಕ್ಕೆ 2-3 ಬಾರಿ ಹೀಗೆ ಮಾಡಿದ್ರೆ ಸೋಂಕು ತಗುಲಿದ್ದರೆ ಕಡಿಮೆಯಾಗುತ್ತದೆ.

ತುರಿಕೆ ಸಮಸ್ಯೆ ಜೋರಾಗಿದ್ದಲ್ಲಿ ಐಸ್ ಬಳಸಬಹುದು. ಆದ್ರೆ ನೇರವಾಗಿ ಐಸ್ ಉಪಯೋಗಿಸಬೇಡಿ. ಒಂದು ಬಟ್ಟೆಯೊಳಗೆ ಐಸ್ ಇಟ್ಟು ಬಳಸಿ.

ಬೆಳ್ಳುಳ್ಳಿ ತಿನ್ನುವ ಮೂಲಕ ಕೂಡ ನಿಮ್ಮ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಖಾಲಿ ಹೊಟ್ಟೆಯಲ್ಲಿ ಎರಡು ಬೆಳ್ಳುಳ್ಳಿ ಎಸಳನ್ನು ತಿನ್ನುತ್ತ ಬಂದಲ್ಲಿ ಸೋಂಕು ಕಡಿಮೆಯಾಗುತ್ತದೆ.

ಸಕ್ಕರೆ ಇಲ್ಲದ ಮೊಸರನ್ನು ಪ್ರತಿದಿನ ಸೇವನೆ ಮಾಡಿ. ಖಾಸಗಿ ಭಾಗಕ್ಕೆ ಮೊಸರು ಹಚ್ಚಿಕೊಳ್ಳುವುದರಿಂದಲೂ ಸಮಸ್ಯೆ ದೂರ ಮಾಡಬಹುದು.

ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ಆ ನೀರಿನಲ್ಲಿ ಖಾಸಗಿ ಭಾಗವನ್ನು ತೊಳೆದುಕೊಳ್ಳಿ. ಇದು ಬ್ಯಾಕ್ಟೀರಿಯಾವನ್ನು ಕೊಲ್ಲಲು ನೆರವಾಗುತ್ತದೆ.

ನೀರಿಗೆ ತುಳಸಿ ಎಲೆಯನ್ನು ಹಾಕಿ ಚೆನ್ನಾಗಿ ಕುದಿಸಿ. ಆ ನೀರನ್ನು ದಿನದಲ್ಲಿ 2-3 ಬಾರಿ ಕುಡಿಯುತ್ತ ಬಂದರೆ ದೇಹದ ಯಾವುದೇ ಭಾಗದಲ್ಲಿ ತುರಿಕೆ ಕಾಣಿಸಿಕೊಂಡರೂ ಕಡಿಮೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read