ಚಳಿಗಾಲದಲ್ಲಿ ಕಾಡುವ ಶೀತ, ತಲೆನೋವು ಮತ್ತು ಜ್ವರಕ್ಕೆ ಇಲ್ಲಿದೆ ಮನೆಮದ್ದು

ಋತು ಬದಲಾದಂತೆ  ಶೀತ ಮತ್ತು ಜ್ವರದಂತ ಅನಾರೋಗ್ಯಕ್ಕೆ ತುತ್ತಾಗುವುದು ಸಾಮಾನ್ಯ. ಈ ಅನಾರೋಗ್ಯ ಸಮಸ್ಯೆಗಳಿಂದ ಹೊರಬರಲು ಕೆಲವು ಮನೆಮದ್ದುಗಳನ್ನು ಬಳಸಬಹುದು.

ಮೂಗು ಕಟ್ಟುವುದು, ಪದೇಪದೇ ಸೀನುವುದು ಮತ್ತು ಕೆಮ್ಮುವುದು ಚಳಿಗಾಲದಲ್ಲಿ ಕಾಡುವ ಸಮಸ್ಯೆ. ಕೊರೊನಾ ಪ್ರಕರಣಗಳೂ ಹೆಚ್ಚಾಗ್ತಿರುವ ಕಾರಣ  ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಬಹಳ ಮುಖ್ಯ. ಶೀತ ಅಥವಾ ಜ್ವರದ ಲಕ್ಷಣಗಳು ಕಂಡುಬಂದರೆ ಶುಂಠಿಯ ಸೇವನೆ ಮಾಡಿ. ಶುಂಠಿ ಚಹಾ ಮತ್ತು ಶುಂಠಿ ಹಾಲು ಇಂತಹ ಸಮಸ್ಯೆಗಳಿಗೆ ರಾಮಬಾಣ. ಶುಂಠಿಯನ್ನು ಒಂದು ಕಪ್ ಬಿಸಿ ನೀರು ಅಥವಾ ಹಾಲಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ಈ ವಿಧಾನ ಶೀತ ಮತ್ತು ಸಾಮಾನ್ಯ ಜ್ವರದಿಂದ ಬೇಗ ಪರಿಹಾರವನ್ನು ನೀಡುತ್ತದೆ.

ಅರಿಶಿನ ಹಾಲು ಶೀತಕ್ಕೆ ಪರಿಹಾರವನ್ನು ನೀಡುವುದಷ್ಟೇ ಅಲ್ಲದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಿಸಿ ಹಾಲಿಗೆ ಒಂದು ಚಮಚ ಅರಿಶಿನವನ್ನು ಹಾಕಿ ಕುದಿಸಿ ಕುಡಿಯಬೇಕು. ಇದರಿಂದ ಶೀತಕ್ಕೆ ಶೀಘ್ರ ಪರಿಹಾರ ದೊರೆಯುತ್ತದೆ. ಅರಿಶಿನವು ಆ್ಯಂಟಿಬಯೋಟಿಕ್ ಗುಣಗಳನ್ನು ಹೊಂದಿದೆ. ಸೂರ್ಯನ ಬೆಳಕು ದೇಹಕ್ಕೆ ಅಗತ್ಯ. ಸ್ವಲ್ಪ ಸಮಯದವರೆಗೆ ಬಿಸಿಲಿನಲ್ಲಿ ಕುಳಿತುಕೊಳ್ಳಬೇಕು.

ಚಳಿಗಾಲದಲ್ಲಿ ನೀರಿನ ಬಳಕೆ ಹೆಚ್ಚು ಮಾಡಿ. ಚಳಿಗಾಲದಲ್ಲಿ ದೇಹ ಬೆವರುವುದು ಕಡಿಮೆ. ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ದೇಹದ ನೀರಿನಂಶ ಸಮತೋಲನದಲ್ಲಿಡಲು ಬಿಸಿ ನೀರು ಅಥವಾ ಬೆಚ್ಚಗಿನ ನೀರನ್ನು ಸಾಧ್ಯವಾದಷ್ಟು ಕುಡಿಯಬೇಕು. ತರಕಾರಿಯ ಬಿಸಿ ಸೂಪ್ ಕೂಡ ಉತ್ತಮ ಮನೆಮದ್ದಾಗಿದೆ. ಗಂಟಲು ಉರಿ ಅಥವಾ ನಾಲಿಗೆ ರುಚಿಸದೆ ಇರುವಾಗ ಬಿಸಿ ಸೂಪ್ ಕುಡಿಯಿರಿ. ಸ್ವಲ್ಪ ಬ್ಲ್ಯಾಕ್ ಪೆಪ್ಪರ್ ಹಾಕಿ ಮಾಡಿದ ಸೂಪ್ ಸೇವಿಸುವುದರಿಂದ ಗಂಟಲು ಉರಿ ಮತ್ತು ಶೀತ ಬಹುಬೇಗ ಕಡಿಮೆ ಆಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read