ಸಮಯಕ್ಕಿಂತ ಮೊದಲು ಮುಟ್ಟಾಗಲು ಇಲ್ಲಿದೆ ʼಮನೆ ಮದ್ದುʼ

ಹಿಂದಿನ ಕಾಲದಿಂದ ನಡೆದು ಬಂದ ಕೆಲವೊಂದು ಸಂಪ್ರದಾಯಗಳನ್ನು ಮಹಿಳೆಯರು ಈಗಲೂ ಪಾಲಿಸಿಕೊಂಡು ಬಂದಿದ್ದಾರೆ. ಮುಟ್ಟಿನ ವೇಳೆ ಅವರು ದೇವರ ಪೂಜೆ ಸೇರಿದಂತೆ ಕೆಲವೊಂದು ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಮುಟ್ಟಿನ ದಿನ ಹತ್ತಿರ ಬರ್ತಾ ಇದೆ. ಅದೇ ದಿನಾಂಕದಂದು ಮನೆಯಲ್ಲಿ ವಿಶೇಷ ಪೂಜೆ ಇದೆ ಎಂದಾದ್ರೆ ಮಹಿಳೆ ಇರಲಿ, ಹುಡುಗಿ ಇರಲಿ ಚಿಂತೆಗೆ ಬೀಳ್ತಾಳೆ.

ಮುಟ್ಟು ಮುಂದೆ ಹೋಗಲು ಅಥವಾ ಹಿಂದೆ ಬರುವಂತೆ ಔಷಧಿ ತೆಗೆದುಕೊಳ್ಳಲು ಮುಂದಾಗ್ತಾಳೆ. ಮಾತ್ರೆಗಳ ಮೊರೆ ಹೋಗ್ತಾಳೆ. ಪದೇ ಪದೇ ಮಾತ್ರೆ ನುಂಗಿದ್ರೆ ಅಪಾಯ ನಿಶ್ಚಿತ. ಹಾಗಾಗಿ ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿಕೊಂಡು ಮುಟ್ಟನ್ನು ಹಿಂದೆ ಹಾಕಿಕೊಳ್ಳುವ ಸುಲಭ ಉಪಾಯವನ್ನು ನಾವು ಹೇಳ್ತೇವೆ ಕೇಳಿ.

ಅರಿಶಿನ : ನಿಯಮಿತ ಮುಟ್ಟಿಗೆ ಈ ಅರಿಶಿನ ಎಷ್ಟು ಉಪಕಾರಿಯೋ ಅಷ್ಟೇ ಮುಟ್ಟು ಹಿಂದೆ ಬರಲು ಇದು ನೆರವಾಗುತ್ತದೆ. ಮುಟ್ಟು ಐದು ದಿನ ಮೊದಲೇ ಆಗಲು ಅರಿಶಿನ ಒಳ್ಳೆಯ ಔಷಧಿ. ಮುಟ್ಟಿನ ದಿನಾಂಕಕ್ಕಿಂತ 15 ದಿನ ಮೊದಲು ಕುದಿಯುತ್ತಿರುವ ನೀರಿಗೆ ಒಂದು ಚಿಟಕಿ ಅರಿಶಿನ ಹಾಕಿ ಬೆಳಿಗ್ಗೆ ಹಾಗೂ ರಾತ್ರಿ ಕುಡಿಯುತ್ತ ಬಂದ್ರೆ ಮುಟ್ಟು ನಿಗದಿತ ಸಮಯಕ್ಕಿಂತ ಐದು ದಿನ ಮೊದಲಾಗುತ್ತದೆ.

ಕ್ಯಾರೆಟ್ : ಕ್ಯಾರೆಟ್ ನಲ್ಲಿ ಕ್ಯಾರೋಟಿನ್ ಅಂಶ ಜಾಸ್ತಿ ಇರುತ್ತದೆ. ಅದು ಮುಟ್ಟು ಹಿಂದೆ ಬರಲು ನೆರವಾಗುತ್ತದೆ. ಪ್ರತಿದಿನ ಮೂರರಿಂದ ನಾಲ್ಕು ಬಾರಿ ತಾಜಾ ಕ್ಯಾರೆಟ್ ತಿನ್ನುತ್ತ ಬಂದ್ರೆ ಮುಟ್ಟು ಹಿಂದಕ್ಕೆ ಬರುತ್ತದೆ.

ಎಳ್ಳು : ಎಳ್ಳಿನ ಸೇವನೆಯಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಹಾಗಾಗಿ ಮುಟ್ಟು ನಿಗದಿತ ಸಮಯಕ್ಕಿಂತ ಮೊದಲಾಗುತ್ತದೆ. ನಿಗದಿತ ಸಮಯಕ್ಕಿಂತ 15 ದಿನ ಮೊದಲು ಬಿಸಿ ನೀರಿಗೆ ಸ್ವಲ್ಪ ಎಳ್ಳನ್ನು ಸೇರಿಸಿ ದಿನಕ್ಕೆ ಎರಡು ಬಾರಿ ಕುಡಿಯುತ್ತ ಬಂದ್ರೆ ಬೇಗ ಋತುಮತಿಯಾಗಬಹುದು.

ಕಾಕಂಬಿ, ಶುಂಠಿ ರಸ : ಮುಟ್ಟು ಹಿಂದೆ ಬರಬೇಕೆಂದಿದ್ದವರು ಶುಂಠಿ ರಸ ಸೇವನೆ ಮಾಡಬೇಕು. ನೀರಿಗೆ ಶುಂಠಿ ರಸ, ಕಾಕಂಬಿ ಹಾಗೂ ಸ್ವಲ್ಪ ಸಕ್ಕರೆ ಬೆರೆಸಿ ಕುಡಿಯುತ್ತ ಬಂದರೆ ಫಲಿತಾಂಶ ನಿಶ್ಚಿತ.

ಪಪ್ಪಾಯಿ : ಕ್ಯಾರೋಟಿನ್ ಅಂಶ ಅತಿ ಹೆಚ್ಚಿರುವ ಹಣ್ಣುಗಳಲ್ಲಿ ಪಪ್ಪಾಯಿ ಕೂಡ ಒಂದು. ಪಪ್ಪಾಯಿ ಸೇವನೆಯಿಂದ ಮುಟ್ಟಿನ ದಿನಾಂಕವನ್ನು ಸುಲಭವಾಗಿ ಹಿಂದಕ್ಕೆ ಹಾಕಬಹುದು. ಜೊತೆಗೆ ಯಾವುದೇ ಅಡ್ಡ ಪರಿಣಾಮವಿಲ್ಲ. ಮುಟ್ಟಿನ ವೇಳೆ ಕಾಣಿಸಿಕೊಳ್ಳುವ ನೋವನ್ನು ಕೂಡ ಇದು ಶಮನ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read