ಬಿರು ಬೇಸಿಗೆಯಲ್ಲೂ ʼವಿದ್ಯುತ್‌ʼ ಬಿಲ್‌ ಉಳಿಸಲು ಇಲ್ಲಿದೆ ಟಿಪ್ಸ್‌

ಈಗಾಗ್ಲೇ ಹಲವು ನಗರಗಳಲ್ಲಿ ಬೇಸಿಗೆಯ ಸೆಖೆ ಆರಂಭವಾಗಿಬಿಟ್ಟಿದೆ. ಸೆಖೆಗಾಲದಲ್ಲಿ ಎಸಿ, ಫ್ರಿಡ್ಜ್, ಕೂಲರ್, ವಾಷಿಂಗ್ ಮಷಿನ್ ಬಳಕೆ ಜಾಸ್ತಿಯಾಗೋದ್ರಿಂದ ಕರೆಂಟ್‌ ಬಿಲ್‌ ಕೂಡ ಹೆಚ್ಚು ಬರುವುದು ನಿಶ್ಚಿತ.

ಚಳಿಗಾಲದಂತೆ ಬೇಸಿಗೆಯಲ್ಲೂ ವಿದ್ಯುತ್‌ ಬಿಲ್‌ ಕಡಿಮೆ ಬರುವಂತೆ ಮಾಡಲು ಕೆಲವೊಂದು ಟಿಪ್ಸ್‌ ಇಲ್ಲಿದೆ. ಇದನ್ನು ಅನುಸರಿಸಿದ್ರೆ ನಿಮ್ಮ ಬಿಲ್‌ ನಲ್ಲಿ ಶೇ.50ರಷ್ಟು ಹಣವನ್ನು ಉಳಿಸಬಹುದು.

ಇದಕ್ಕಾಗಿ ನೀವು ಎಸಿ ಆನ್‌ ಮಾಡದೇ ಸೆಖೆಯಲ್ಲಿ ಕೂರಬೇಕೆಂದಿಲ್ಲ. ಅಥವಾ ವಿದ್ಯುತ್‌ ಬಳಸಲು ಕಂಜೂಸಿ ಮಾಡಬೇಕಾಗಿಲ್ಲ.

ಸೋಲಾರ್‌ ಪ್ಯಾನಲ್‌ ಅಳವಡಿಸಿ : ಸೌರ ಫಲಕಗಳನ್ನು ಅಳವಡಿಸಿದ್ರೆ ವಿದ್ಯುತ್‌ ಉಳಿತಾಯ ಮಾಡಬಹುದು. ನಿಮ್ಮ ಮನೆಯ ಛಾವಣಿಯ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಬಹುದು.

ಎಲ್‌ ಇ ಡಿ ಲೈಟ್‌ ಅಳವಡಿಸಿ : ಎಲ್ಇಡಿ ಬಲ್ಬ್‌ ಗಳು ಕಡಿಮೆ ಕರೆಂಟ್‌ ಬಳಸಿ ಹೆಚ್ಚು ಬೆಳಕನ್ನು ನೀಡುತ್ತವೆ. ಹಾಗಾಗಿ ಉಳಿದ ಬಲ್ಬ್‌ ಗಳ ಬದಲು ಇವುಗಳನ್ನೇ ಬಳಸಿದ್ರೆ ವಿದ್ಯುತ್‌ ಉಳಿತಾಯ ಮಾಡಬಹುದು.

ಸಿ ಎಫ್‌ ಎಲ್‌ ಬಲ್ಬ್‌ ಬಳಸಿ : ಸಾಮಾನ್ಯ ಬಲ್ಬ್ ಮತ್ತು ಟ್ಯೂಬ್ ಲೈಟ್‌ಗಿಂತ, ಸಿ ಎಫ್‌ಎಲ್‌ ಐದು ಪಟ್ಟು ವಿದ್ಯುತ್ ಉಳಿಸುತ್ತದೆ. ಆದ್ದರಿಂದ ಟ್ಯೂಬ್ ಲೈಟ್ ಬದಲಿಗೆ CFL ಬಳಸಿ. ನಿಮಗೆ ಬೆಳಕು ಅಗತ್ಯವಿಲ್ಲದ ಕೋಣೆಯಲ್ಲಿ ಅನಾವಶ್ಯಕವಾಗಿ ಲೈಟ್‌ ಉರಿಸಬೇಡಿ.

ಫ್ಯಾನ್‌ ಬಳಸಿ : ಬೇಸಿಗೆಯಲ್ಲಿ ಎಸಿಗಿಂತ ಹೆಚ್ಚಾಗಿ ಸೀಲಿಂಗ್ ಮತ್ತು ಟೇಬಲ್ ಫ್ಯಾನ್ ಬಳಸಿ. ಫ್ಯಾನ್‌ ಗೆ ಪ್ರತಿ ಗಂಟೆಗೆ 40 ಪೈಸೆ ಖರ್ಚಾದ್ರೆ ಎಸಿಗೆ ಗಂಟೆಗೆ 12 ರೂಪಾಯಿ ವೆಚ್ಚವಾಗುತ್ತದೆ. ಎಸಿ ಹಾಕಲೇಬೇಕಾದಾಗ ಅದನ್ನು 25 ಡಿಗ್ರಿಯಲ್ಲಿ ಚಲಾಯಿಸಿ.  ಎಸಿ ಚಾಲನೆಯಲ್ಲಿರುವ ಕೊಠಡಿಯ ಬಾಗಿಲು ಮುಚ್ಚಿ.

ಫ್ರಿಡ್ಜ್‌ ಅನ್ನು ನೇರ ಸೂರ್ಯನ ಬೆಳಕಿನಿಂದ ದೂರವಿಡಿ. ರೆಫ್ರಿಜರೇಟರ್ ಸುತ್ತಲೂ ಗಾಳಿಯ ಹರಿವಿಗೆ ಸಾಕಷ್ಟು ಜಾಗವಿರಲಿ. ಬಿಸಿ ಆಹಾರವನ್ನು ಫ್ರಿಡ್ಜ್‌ನಲ್ಲಿ ಇಡಬೇಡಿ. ಕಂಪ್ಯೂಟರ್ ಮತ್ತು ಟಿವಿ ಮಾನಿಟರ್ ಅನ್ನು ಸ್ಪೀಡ್ ಮೋಡ್‌ನಲ್ಲಿ ಇರಿಸಿ. ಫೋನ್ ಮತ್ತು ಕ್ಯಾಮರಾ ಚಾರ್ಜರ್ ಅನ್ನು ಬಳಸಿದ ನಂತರ, ಅದನ್ನು ಪ್ಲಗ್‌ನಿಂದ ಅನ್‌ಪ್ಲಗ್ ಮಾಡಿ. ಪ್ಲಗ್ ಇನ್ ಮಾಡಿದಾಗ ಹೆಚ್ಚು ವಿದ್ಯುತ್ ಬಳಕೆಯಾಗುತ್ತದೆ. ಈ ಟಿಪ್ಸ್‌ ಗಮನದಲ್ಲಿರಿಸಿಕೊಂಡರೆ ವಿದ್ಯುತ್‌ ಬಿಲ್‌ ಗೆ ಖರ್ಚಾಗುವ ಹಣವನ್ನು ಉಳಿತಾಯ ಮಾಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read