ಟಿವಿ ಸ್ಕ್ರೀನ್‌ಗೆ ಹಾನಿಯಾಗದಂತೆ ಸ್ವಚ್ಛಗೊಳಿಸಲು ಇಲ್ಲಿದೆ ಟಿಪ್ಸ್‌

ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಟಿವಿ ಎಲ್ಲರ ಫೇವರಿಟ್‌. ಬಹುತೇಕ ಎಲ್ಲಾ ಮನೆಗಳಲ್ಲೂ ಮನರಂಜನೆಗಾಗಿ ಟಿವಿ ಬಳಕೆಯಲ್ಲಿದೆ. ಕಾಲ ಬದಲಾದಂತೆ ಸ್ಮಾರ್ಟ್‌ಫೋನ್‌ ಜೊತೆಯಲ್ಲಿ ಹೊಸ ಹೊಸ ತಂತ್ರಜ್ಞಾನದ ಟಿವಿಗಳು ಕೂಡ ಮಾರುಕಟ್ಟೆಗೆ ಬಂದಿವೆ. ಟಿವಿ ತಂತ್ರಜ್ಞಾನ ಶುರುವಾಗಿದ್ದು 1920ರಲ್ಲಿ. ಮೊದಲ ಚಲಿಸುವ ಚಿತ್ರಗಳಿಂದ 21  ಶತಮಾನದ ಸ್ಮಾರ್ಟ್ ಟಿವಿಗಳಿಗೆ ತಂತ್ರಜ್ಞಾನ ವಿಕಸನಗೊಂಡಿದೆ.

ಈಗ ಟಿವಿಗಳಲ್ಲಿ 4K ವೈಶಿಷ್ಟ್ಯ ಕೂಡ ಲಭ್ಯವಿದೆ. ಈ ಟೆಲಿವಿಷನ್‌ಗಳು ತುಂಬಾ ಸೂಕ್ಷ್ಮವಾಗಿರುತ್ತವೆ. ಜೋರಾಗಿ ಸ್ಪರ್ಶಿಸಿದರೂ ಒಡೆದು ಹೋಗುವ ಭಯವಿರುತ್ತದೆ. ಟಿವಿ ಪರದೆಯ ಮೇಲೆ ಗೀರುಗಳಂತೂ ಬಹಳ ಬೇಗ ಕಾಣಿಸಿಕೊಳ್ಳುತ್ತವೆ. ಹಾಗಾಗಿ ಈ ಟಿವಿಗಳ ಬಗ್ಗೆ ಬಹಳ ಕಾಳಜಿ ವಹಿಸಬೇಕು.

ಎಲ್ಇಡಿ ಮತ್ತು ಎಲ್ಸಿಡಿ ಟಿವಿ ಪರದೆಗಳು ಬೇಗನೆ ಹಾಳಾಗುವುದನ್ನು ತಡೆಯಬೇಕೆಂದರೆ ಒದ್ದೆ ಬಟ್ಟೆಯಿಂದ ಒರೆಸಬಾರದು. ಒದ್ದೆ ಬಟ್ಟೆಯಿಂದ ಸ್ಕ್ರೀನ್‌ ಒರೆಸಿದಾಗ ತಕ್ಷಣವೇ ಪರದೆಯ ಮೇಲೆ ಗೀರುಗಳು ಕಾಣಿಸಿಕೊಳ್ಳುತ್ತವೆ. ಯಾವುದೇ ವಸ್ತುವಿಗೆ ತಾಗಿದಾಗ ಪರದೆ ಹಾಳಾಗುತ್ತದೆ. ಹಾಗಾಗಿ ಮಕ್ಕಳು ಟಿವಿಯ ಸಮೀಪಕ್ಕೆ ಹೋಗದಂತೆ ಎಚ್ಚರಿಕೆ ವಹಿಸಬೇಕು. ಏಕೆಂದರೆ ಮಕ್ಕಳು ಉದ್ದೇಶಪೂರ್ವಕವಾಗಿ ದೂರದರ್ಶನದತ್ತ ವಸ್ತುಗಳನ್ನು ಎಸೆಯುತ್ತಾರೆ.

ಒದ್ದೆ ಬಟ್ಟೆಯಿಂದ ಧೂಳನ್ನು ಒರೆಸಬಾರದು ಜೊತೆಗೆ ಟಿವಿ ಮುಂದೆ ವಾಟರ್ ಕೂಲರ್‌ಗಳನ್ನು ಇಡಬಾರದು. ಕೂಲರ್‌ನಿಂದ ಹೊರಹೊಮ್ಮುವ ನೀರಿನ ಸ್ಪ್ಲಾಶ್‌ಗಳು ಪರದೆಯನ್ನು ಹಾನಿಗೊಳಿಸುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read