‘ಮೇಕಪ್’ ನಂತರದ ಅಡ್ಡ ಪರಿಣಾಮ ನಿವಾರಿಸಲು ಇಲ್ಲಿದೆ ಟಿಪ್ಸ್

ಜೊಜೊಬಾ ಆಯಿಲ್ ಒಂದು ನೈಸರ್ಗಿಕವಾದ ತೈಲವಾಗಿದೆ. ಇದನ್ನು ತ್ವಚೆಯ ಆರೈಕೆಗೆ ಬಳಸುತ್ತಾರೆ. ಇದು ಚರ್ಮಕ್ಕೆ ತೇವಾಂಶವನ್ನು ಒದಗಿಸುತ್ತದೆ. ವಿಶೇಷವಾಗಿ ಇದು ಮುಖಕ್ಕೆ ಹಚ್ಚಿದ ಮೇಕಪ್ ತೆಗೆಯಲು ಸಹಕಾರಿಯಾಗಿದೆ. ಇದು ಮೇಕಪ್ ನಿಂದ ಚರ್ಮಕ್ಕಾಗುವ ಹಾನಿಯನ್ನು ತಪ್ಪಿಸುತ್ತದೆ.

*ಜೊಜೊಬಾ ಆಯಿಲ್ ಮತ್ತು ಬಾದಾಮಿ ಎಣ್ಣೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಅದಕ್ಕೆ 3 ಹನಿ ವಿಟಮಿನ್ ಇ ಎಣ್ಣೆಯನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. ಬಳಿಕ ಹತ್ತಿಯ ಚೆಂಡನ್ನು ತೆಗೆದುಕೊಂಡು ಮುಖವನ್ನು ಒರೆಸಿಕೊಳ್ಳಿ.

*ಜೊಜೊಬಾ ಆಯಿಲ್ 1 ಚಮಚ ಹಾಗೂ ರೋಸ್ ವಾಟರ್ 1 ಚಮಚ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿ ಒಣ ಬಟ್ಟೆಯಿಂದ ಒರೆಸಿಕೊಳ್ಳಿ. ಇದರಿಂದ ಮೇಕಪ್ ಕ್ಲೀನ್ ಆಗಿ ಹೋಗುತ್ತದೆ. ಮೇಕಪ್ ನಿಂದಾಗುವ ಅಡ್ಡಪರಿಣಾಮವನ್ನೂ ನಿವಾರಿಸುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read