ಇಲ್ಲಿದೆ ಹಲಸಿನ ಹಣ್ಣಿನ ಬಹು ಉಪಯೋಗ

ಇನ್ನೇನು ಹಲಸಿನ ಹಣ್ಣಿನ ಸೀಸನ್ ಆರಂಭವಾಗಲಿದೆ. ಹಲಸಿನ ಹಣ್ಣು ಇಷ್ಟಪಡದೇ ಇರುವವರು ತುಂಬಾ ಕಡಿಮೆ,  ಆದರೆ ಹಣ್ಣಿನ ಸೇವನೆಯಿಂದಾಗುವ ಪ್ರಯೋಜನಗಳನ್ನು ತಿಳಿಯೋಣ.

ಹಲಸಿನ ಹಣ್ಣು, ಕಾಯಿಯ ಹತ್ತಾರು ತಿನಿಸುಗಳನ್ನು ಮಾಡಬಹುದು. ಇದರಲ್ಲಿ ಹಲವಾರು ವಿಟಮಿನ್ ಗಳು ಮತ್ತು ಖನಿಜಾಂಶಗಳು ಇವೆ. ಇದರ ಪ್ರೊಟೀನ್, ವಿಟಮಿನ್ ಬಿ, ಪೊಟ್ಯಾಸಿಯಂ ಇದನ್ನೊಂದು ಉತ್ತಮ ಹಣ್ಣಾಗಿ ಮಾಡಿದೆ. ಹಲಸಿನಹಣ್ಣಿನಲ್ಲಿ ಕೊಲೆಸ್ಟ್ರಾಲ್ ಮತ್ತು ಕೊಬ್ಬಿನಂಶ ಇಲ್ಲ. ಹಾಗಾಗಿ ತೂಕ ಇಳಿಸಲು ಬಯಸುವವರು ಇದನ್ನು ಸೇವಿಸಬಹುದು.

ಪೊಟ್ಯಾಸಿಯಂ ಅಧಿಕವಾಗಿರುವುದರಿಂದ ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ಹೃದಯ ಸಂಬಂಧಿ ರೋಗಗಳು ದೂರವಾಗುತ್ತದೆ.
ನಿದ್ರಾಹೀನತೆಯನ್ನು ದೂರಪಡಿಸಿ ಚರ್ಮಕ್ಕೆ ಹೊಳಪು ನೀಡುತ್ತದೆ. ಅಲ್ಸರ್ ಸಮಸ್ಯೆಯನ್ನು ನಿವಾರಿಸುತ್ತದೆ. ಮೂಳೆಗಳನ್ನು ಬಲಪಡಿಸುವ ವಿಶೇಷ ಸಾಮರ್ಥ್ಯವೂ ಇದಕ್ಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read