ಇಲ್ಲಿವೆ ಸಂಗಾತಿಯ ಮನಸ್ಸು ಗೆಲ್ಲಲು ಸಿಂಪಲ್ ಟಿಪ್ಸ್

ನಿಮ್ಮ ಸಂಗಾತಿಯ ಮನಸ್ಸು ಗೆಲ್ಲಬೇಕು ಅಂದ್ರೆ ನೀವು ಕೆಲವೊಂದು ಸಣ್ಣಪುಟ್ಟ ಕೆಲಸ ಮಾಡಬೇಕು. ಇದ್ರಿಂದ ನಿಮ್ಮ ಸಂಗಾತಿ ತಾನು ತುಂಬಾ ಅದೃಷ್ಟವಂತೆ ಎಂದುಕೊಳ್ತಾಳೆ. ಆ ಕೆಲಸಗಳು ಯಾವುವು ಅನ್ನೋದನ್ನು ನೋಡೋಣ.

ಅಡುಗೆ ಮಾಡಿ : ಪತ್ನಿಯ ಜೊತೆಗೆ ಒಂದೊಳ್ಳೆ ಊಟ ಮಾಡೋಣ ಅಂತಾ ನೀವೇನಾದ್ರೂ ಪ್ಲಾನ್ ಮಾಡಿದ್ರೆ ಹೊರಕ್ಕೆ ಹೋಗಿ ಹೋಟೆಲ್ ನಲ್ಲಿ ಡಿನ್ನರ್ ಮಾಡೋದಕ್ಕಿಂತ ನೀವೇ ಅಡುಗೆ ಮಾಡಿ. ಇದರಿಂದ ನಿಮ್ಮ ಸಂಗಾತಿ ಸಂತೋಷಪಡ್ತಾಳೆ.

ಉಡುಗೊರೆ ಕೊಡಿ : ಸಂಗಾತಿಗೆ ಏನಾದ್ರೂ ಗಿಫ್ಟ್ ಕೊಡಬೇಕು, ಆದ್ರೆ ಏನ್ ಕೊಡ್ಲಿ ಅನ್ನೋ ಗೊಂದಲ ಎಲ್ಲರಿಗೂ ಸಾಮಾನ್ಯ. ಒಂದೊಳ್ಳೆ ನೈಟ್ ಡ್ರೆಸ್ ಜೊತೆಗೊಂದು ಗುಲಾಬಿಯನ್ನು ಕೊಡಿ. ಆ ಡ್ರೆಸ್ ನೋಡಿದ ತಕ್ಷಣ ನಿಮ್ಮ ಸಂಗಾತಿಗೆ ಅದನ್ನು ಧರಿಸುವ ಮನಸ್ಸಾಗಬೇಕು.

ಲವ್ ಚಿಟ್ : ನಿಮ್ಮ ಮನಸ್ಸಿನ ಭಾವನೆಯನ್ನು ಬರೆದು ನಿಮ್ಮ ಪತ್ನಿ ಊಹಿಸಿಯೂ ಇರದಂಥ ಜಾಗದಲ್ಲಿ ಅದನ್ನು ಇಡಿ. ಅದು ಖಂಡಿತವಾಗಲೂ ನಿಮ್ಮ ಸಂಗಾತಿಗೆ ಇಷ್ಟವಾಗುತ್ತದೆ.

ಸ್ಪಾ ಬುಕ್ಕಿಂಗ್ : ವೀಕೆಂಡ್ ನಲ್ಲಿ ನಿಮ್ಮ ಸಂಗಾತಿಗೆ ಗೊತ್ತಿಲ್ಲದಂತೆ ಸ್ಪಾ ಬುಕ್ಕಿಂಗ್ ಮಾಡಿ. ಇದರಿಂದ ಇಬ್ಬರಿಗೂ ರಿಲ್ಯಾಕ್ಸೇಶನ್ ಸಿಗುತ್ತದೆ.

ರೊಮ್ಯಾಂಟಿಕ್ ಸಿನೆಮಾ : ನಿಜಜೀವನದಲ್ಲೂ ಫಿಲ್ಮಿಯಾಗಿರುವುದು ಕೆಟ್ಟದೇನಲ್ಲ. ಮನೆಯಲ್ಲೇ ಪಾಪ್ ಕಾರ್ನ್ ಮೆಲ್ಲುತ್ತ ಜೊತೆಯಾಗಿ ರೊಮ್ಯಾಂಟಿಕ್ ಫಿಲ್ಮ್ ನೋಡಿ.

ಗಮನ : ಸಂಗಾತಿಯ ಬಗ್ಗೆ ಯಾವಾಗಲೂ ನಿಮ್ಮ ಗಮನವಿರಲಿ. ನಿಮಗೆ ಆಕೆಯ ಮೇಲೆ ಎಷ್ಟು ಪ್ರೀತಿ ಇದೆ ಅನ್ನೋದನ್ನು ಆಗಾಗ ವ್ಯಕ್ತಪಡಿಸಿ.

ಡೇಟಿಂಗ್ : ವ್ಯಾಲಂಟೈನ್ ಡೇ ದಿನ ಮಾತ್ರ ಡೇಟಿಂಗ್ ಗೆ ಹೋಗಬೇಕೆಂದು ನಿಯಮವೇನಿಲ್ಲ. ವೀಕೆಂಡ್ನಲ್ಲಿ ರೊಮ್ಯಾಂಟಿಕ್ ಡೇಟ್ ಪ್ಲಾನ್ ಮಾಡಿ.

ಇಷ್ಟು ಮಾತ್ರವಲ್ಲ, ಸಂಗಾತಿಯ ಜೊತೆ ಮನಬಿಚ್ಚಿ ಮಾತನಾಡಿ. ಅವಳಿಗಿಷ್ಟವಾದದ್ದನ್ನು ಮಾಡಲು ಬಿಡಿ. ಆಕೆ ನಿಮ್ಮ ಪಾಲಿಗೆ ಎಷ್ಟು ಸ್ಪೆಷಲ್ ಅನ್ನೋದನ್ನು ಮನವರಿಕೆ ಮಾಡಿಕೊಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read