ಇಲ್ಲಿವೆ ಜೇನಿನ ಹಲವು ಸೌಂದರ್ಯವರ್ಧಕ ‘ಉಪಯೋಗ’ಗಳು

ಜೇನು ಕೇವಲ ಆರೋಗ್ಯಕ್ಕಷ್ಟೇ ಅಲ್ಲ, ಸೌಂದರ್ಯಕ್ಕೂ ಹೆಚ್ಚು ಪ್ರಯೋಜನಕ್ಕೆ ಬರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಇದರ ಉಪಯೋಗ ಹೆಚ್ಚು. ಇಲ್ಲಿದೆ ನೋಡಿ ಜೇನನ್ನು ಬಳಸಿ ಸೌಂದರ್ಯ ಪಡೆಯಬಹುದಾದ ಕೆಲ ಸಲಹೆಗಳು.

* ಜೇನುತುಪ್ಪ, ಓಟ್ ಮೀಲ್ ಚಳಿಗಾಲದಲ್ಲಿ ಒಡೆಯುವ ತ್ವಚೆಯನ್ನು ನಿಯಂತ್ರಿಸಲು ಸಹಾಯಕವಾಗುವುದಲ್ಲದೇ ತುರಿಕೆಯನ್ನು ತಡೆಯುತ್ತದೆ.

* ಜೇನುತುಪ್ಪದಿಂದ ಬಾಡಿ ವಾಶ್ ಮಾಡಿಕೊಂಡರೆ ತ್ವಚೆಯು ಮೃದುವಾಗುವುದಲ್ಲದೆ ಸೋಂಕು ನಿವಾರಣೆ ಆಗುತ್ತದೆ.

* ಜೇನುತುಪ್ಪವನ್ನು ಬೆರಳಿಗೆ ಸವರಿಕೊಂಡು ಕಣ್ಣಿನ ಸುತ್ತಲೂ ನಿಧಾನವಾಗಿ ಮಸಾಜ್ ಮಾಡುತ್ತಿದ್ದರೆ ಕಣ್ಣಿನ ಆಯಾಸ ಕಡಿಮೆಯಾಗುತ್ತದೆ.

* ಜೇನುತುಪ್ಪದ ಫೇಸ್ ಪ್ಯಾಕ್ ಮಾಡಿಕೊಳ್ಳುವುದರಿಂದ ಮುಖದ ಕಾಂತಿಯು ಹೆಚ್ಚುವುದಲ್ಲದೆ ಮುಖದಲ್ಲಿನ ನೆರಿಗೆ, ಜಿಡ್ಡನ್ನು ಹೋಗಲಾಡಿಸಬಹುದು.

* ಜೇನುತುಪ್ಪವನ್ನು ನಿಂಬೆರಸದೊಡನೆ ಬೆರೆಸಿ ಮುಖವನ್ನು ತೊಳೆಯುವುದರಿಂದ ಮುಖದಲ್ಲಿನ ಕಲೆಗಳು ನಿವಾರಣೆಯಾಗುತ್ತವೆ.

* ನೀರಿನಲ್ಲಿ ಬೆರೆಸಿದ ಜೇನುತುಪ್ಪದ ಮಿಶ್ರಣವನ್ನು ತಲೆಕೂದಲಿಗೆ ಲೇಪಿಸುತ್ತಿದ್ದರೆ ಕೂದಲು ಸಿಕ್ಕ ಆಗುವುದನ್ನು ನಿಯಂತ್ರಿಸಬಹುದು. ತಲೆಹೊಟ್ಟಿನ ಸಮಸ್ಯೆಯೂ ನಿವಾರಣೆಯಾಗುತ್ತದೆ. ಕೂದಲು ರೇಷ್ಮೆಯಂತೆ ಮೃದುವಾಗುವುದರ ಜೊತೆಗೆ ಕೂದಲಿಗೆ ಒಳ್ಳೆಯ ಮಾಯಿಶ್ಚರೈಸಿಂಗ್ ದೊರೆಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read