ಪ್ರತಿದಿನ ವಾಕಿಂಗ್‌ ಮಾಡಲು ಇಲ್ಲಿವೆ 10 ಉಪಯುಕ್ತ ಕಾರಣಗಳು

ಪ್ರತಿಯೊಬ್ಬರೂ ಫಿಟ್ನೆಸ್‌ ಬಗ್ಗೆ ಗಮನಹರಿಸಲೇಬೇಕು. ಅದರರ್ಥ ಜಿಮ್‌ ಗೆ ಹೋಗಿ ಹೆವಿ ವರ್ಕೌಟ್‌ ಮಾಡಬೇಕೆಂದಲ್ಲ. ನಿಮ್ಮ ಜೀವನ ಶೈಲಿ ಹಾಗೂ ನಿತ್ಯ ಸೇವಿಸುವ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಿ.

ಇದರ ಜೊತೆಗೆ ನಿತ್ಯ ತಪ್ಪದೇ ವಾಕಿಂಗ್‌ ಮಾಡುವುದು ಕೂಡ ಅತ್ಯಂತ ಅವಶ್ಯಕ. ನಿಮ್ಮ ಮನಸ್ಸು ಮತ್ತು ದೇಹ ಎರಡನ್ನೂ ಆರೋಗ್ಯವಾಗಿಟ್ಟುಕೊಳ್ಳಲು ವಾಕಿಂಗ್‌ ಸಹಕರಿಸುತ್ತದೆ. ಪ್ರತಿದಿನ ತಪ್ಪದೇ ಏಕೆ ವಾಕಿಂಗ್‌ ಮಾಡಬೇಕು ಎಂಬುದಕ್ಕೆ 10 ಕಾರಣಗಳು ಸಹ ಇವೆ.

ವಾಕಿಂಗ್‌ ಮಾಡುವುದರಿಂದ ನಿಮ್ಮ ಮೆದುಳು ಚುರುಕಾಗುತ್ತದೆ. ಪ್ರತಿದಿನ ಸ್ವಲ್ಪ ಹೊತ್ತಾದರೂ ಸೂರ್ಯನ ಬೆಳಕು ದೇಹದ ಮೇಲೆ ಬೀಳುವುದರಿಂದ ವಿಟಮಿನ್‌ ಡಿ ಕೂಡ ಸಿಕ್ಕಂತಾಗುತ್ತದೆ. ನೀವು ಅತ್ಯಂತ ಚಟುವಟಿಕೆಯಿಂದಿರಲು ಇದು ಸಹಕಾರಿ.

ವಾಕಿಂಗ್‌ ಮಾಡುವುದರಿಂದ ಸ್ನಾಯುಗಳು ಬಲಶಾಲಿಯಾಗುತ್ತವೆ. ರಕ್ತದಲ್ಲಿನ ಗ್ಲುಕೋಸ್‌ ಲೆವೆಲ್‌ ಕೂಡ ಸುಧಾರಿಸುತ್ತದೆ. ನಿತ್ಯವೂ ವಾಕಿಂಗ್‌ ಮಾಡುವುದರಿಂದ ಹೃದಯದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ವಾಕಿಂಗ್‌ ಒಂಥರಾ ಎನರ್ಜಿ ಬೂಸ್ಟರ್‌ ಕೂಡ.

ನಿಮ್ಮ ಮನಸ್ಥಿತಿಯನ್ನು ಚೆನ್ನಾಗಿಟ್ಟುಕೊಳ್ಳಲು ಸಹಕಾರಿಯಾಗುತ್ತದೆ. ಜೊತೆಗೆ ಪ್ರಕೃತಿಯ ಜೊತೆಗೆ ಬೆರೆಯಲು ಅವಕಾಶ ಸಿಕ್ಕಂತಾಗುತ್ತದೆ. ಉತ್ತಮ ಆರೋಗ್ಯ ನಿಮ್ಮದಾಗಬೇಕು ಎಂದರೆ ಪ್ರತಿದಿನ ಕನಿಷ್ಟ 20 ನಿಮಿಷ ವಾಕಿಂಗ್‌ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read