ದಟ್ಟ, ಸುಂದರ ಕೇಶರಾಶಿ ಪಡೆಯಲು ಇಲ್ಲಿವೆ ʼಟಿಪ್ಸ್ʼ

ಕೂದಲು ಉದ್ದವಿದ್ದರೂ ಸರಿ, ಚಿಕ್ಕದಾಗಿದ್ದರೂ ಸರಿ, ಕೂದಲ ಸೊಬಗು ಹೆಚ್ಚುವುದೇ ಅದು ಆರೋಗ್ಯವಾಗಿದ್ದಾಗ ಮಾತ್ರ.‌

ಹೀಗಾಗಿ ಕೂದಲಿಗೆ ಸೂಕ್ತವಾದ ಆರೈಕೆ ಅಗತ್ಯ. ಅದು ಯಾವ ರೀತಿ ಅಂತ ತಿಳಿಯೋಣ.

* ಕೂದಲ ಹೊಳಪಿಗಾಗಿ ಮೊಟ್ಟೆ ಹೆಚ್ಚು ಉಪಯುಕ್ತ. ಇದರಲ್ಲಿರುವ ಪ್ರೊಟೀನ್, ಕಬ್ಬಿಣ ಅಂಶ ಕೂದಲ ಪೋಷಣೆಗೆ ಸಹಕಾರಿ. ಮೊಟ್ಟೆಯ ಬಿಳಿ ಭಾಗಕ್ಕೆ 1 ಚಮಚ ಆಲೀವ್ ಎಣ್ಣೆ ಮತ್ತು ಜೇನನ್ನು ಬೆರೆಸಿ. ಈ ಮಿಶ್ರಣವನ್ನು ಕೂದಲ ಬುಡ ಹಾಗೂ ಕೂದಲಿಗೆ ಹಚ್ಚಿ ಅರ್ಧ ಗಂಟೆ ಬಳಿಕ ತೊಳೆಯಬೇಕು.

* ಲೋಳೆಸರ ಕೂದಲನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ. ನಾಲ್ಕು ಚಮಚಗಳಷ್ಟು ಲೋಳೆಸರದ ತಿರುಳಿಗೆ ಎರಡು ಚಮಚದಷ್ಟು ಕೊಬ್ಬರಿ ಎಣ್ಣೆ, ಮೂರು ಚಮಚ ಮೊಸರು ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು. ಇದನ್ನು ಕೂದಲಿಗೆ ಹಚ್ಚಿ ಅರ್ಧಗಂಟೆಯ ಬಳಿಕ ಸ್ವಚ್ಛಗೊಳಿಸಬೇಕು.

* ಕೊಬ್ಬರಿ ಎಣ್ಣೆಗೆ ಸ್ವಲ್ಪ ಕರಿಬೇವು ಹಾಕಿ ಬಿಸಿ ಮಾಡಿ ಕೂದಲು ಹಾಗೂ ಬುಡಕ್ಕೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ಸ್ನಾನ ಮಾಡಿದರೆ ಉತ್ತಮ ಫಲಿತಾಂಶ ಹೊಂದಬಹುದು.

* ಎರಡು ಕಪ್ ಬಿಸಿ ನೀರಿಗೆ ಎರಡು ಚಮಚಗಳಷ್ಟು ಜೇನನ್ನು ಬೆರೆಸಬೇಕು. ನೀರನ್ನು ಸ್ಪ್ರೇ ಮಾಡುವ ಬಾಟಲಿಗೆ ಹಾಕಿಕೊಂಡು ಸ್ನಾನವಾದ ಬಳಿಕ ಇಡೀ ಕೂದಲಿಗೆ ಸ್ಪ್ರೇ ಮಾಡಿಕೊಳ್ಳಬೇಕು. ನಂತರ ಐದು ನಿಮಿಷಗಳ ಕಾಲ ಮಸಾಜ್ ಮಾಡಿಕೊಂಡು ಬಳಿಕ ಮತ್ತೆ ಕೂದಲನ್ನು ತೊಳೆಯಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read