ಆನೆಗಳನ್ನು ಭೂಮಿಯ ಮೇಲಿನ ಅತ್ಯಂತ ಬುದ್ಧಿವಂತ ಜೀವಿ ಎಂದು ಕರೆಯಲಾಗುತ್ತದೆ. ಆನೆಗಳು ತಮ್ಮ ಮರಿಗಳ ಬಗ್ಗೆ ಅತ್ಯಂತ ಜಾಗರೂಕತೆ ಮತ್ತು ಕಾಳಜಿ ವಹಿಸುತ್ತವೆ. ಅದರಲ್ಲೂ ಹೆಣ್ಣಾನೆಗಳು ತಮ್ಮ ಮರಿಗಳನ್ನು ಕ್ರೂರ ಮೃಗಗಳಿಂದ ರಕ್ಷಿಸಲು ಯಾವ ಅಪಾಯವನ್ನು ಬೇಕಿದ್ರೂ ತೆಗೆದುಕೊಳ್ಳುತ್ತದೆ. ಇದೀಗ ತಮ್ಮ ಮರಿಗಳನ್ನು ಆನೆಗಳು ಯಾವ ರೀತಿ ರಕ್ಷಿಸಲು ಮುಂದಾಯ್ತು ಅನ್ನೋದರ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ.
ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ಅವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಆನೆ ಹಿಂಡು ಕಂಡೊಡನೆ ಎರಡು ಪರಭಕ್ಷಕಗಳು ಎಂಟ್ರಿ ಕೊಟ್ಟಿವೆ. ಕೂಡಲೇ ಎಚ್ಚೆತ್ತ ಆನೆಗಳು ತಮ್ಮ ಮರಿಗಳನ್ನು ತಮ್ಮತ್ತ ಸೆಳೆದುಕೊಂಡು ಆಕ್ರಮಣಕಾರಿಯಾಗಿ ನಿಂತಿದೆ. ಮರಿಗಳನ್ನು ತಮ್ಮ ಮಧ್ಯಕ್ಕೆ ಎಳೆದುಕೊಂಡು, ಸುತ್ತಲೂ ಐದು ದಿಕ್ಕುಗಳಿಗೂ ನಿಂತು ಕಣ್ಣಾಡಿಸಿವೆ.
ಆನೆಗಳ ಆಕ್ರಮಣಕಾರಿ ನೋಟಕ್ಕೆ ಪರಭಕ್ಷಕ ಜೀವಿಗಳು ಹೆದರಿ ಅಲ್ಲಿಂದ ಎಸ್ಕೇಪ್ ಆಗಿವೆ. ಆನೆಗಳು ತಮ್ಮ ಮರಿಗಳ ಸುತ್ತಲೂ ವೃತ್ತವನ್ನು ರಚಿಸಿ, ಅವುಗಳನ್ನು ರಕ್ಷಿಸುತ್ತವೆ. ಈ ವಿಡಿಯೋ ವೈರಲ್ ಆಗಿದ್ದು, ಕಾಡಿನಲ್ಲಿ ಆನೆ ಹಿಂಡಿಗಿಂತ ಯಾವುದೇ ಪ್ರಾಣಿ ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ 18 ಸಾವಿರ ವೀಕ್ಷಣೆಗಳನ್ನು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ.
https://twitter.com/susantananda3/status/1679140187782127616?ref_src=twsrc%5Etfw%7Ctwcamp%5Etweetembed%7Ctwterm%5E1679140187782127616%7Ctwgr%5E3c393ba8cc5a8d747404c8f1de24f675f34a9ab8%7Ctwcon%5Es1_&ref_url=https%3A%2F%2Fwww.latestly.com%2Fsocially%2Fsocial-viral%2Fherd-of-elephants-promptly-protects-calves-from-predators-and-circle-around-the-young-ones-ifs-officer-shares-viral-video-watch-5261813.html