Video | ಆಟೋ ಏರಿದ ನಟಿ ಹೇಮಾ ಮಾಲಿನಿ; ಬೆಚ್ಚಿಬಿದ್ದ ಭದ್ರತಾ ಸಿಬ್ಬಂದಿ

ನಟಿ ಮತ್ತು ಸಂಸದೆಯಾಗಿರುವ ಹೇಮಾಮಾಲಿನಿ ಇತ್ತೀಚೆಗೆ ಮುಂಬೈನಲ್ಲಿರುವ ತಮ್ಮ ನಿವಾಸಕ್ಕೆ ಮೆಟ್ರೋ ಮೂಲಕ ಪ್ರಯಾಣಿಸಲು ನಿರ್ಧರಿಸಿದರು. ನಂತರ ಮನೆಗೆ ಆಟೋ ಮೂಲಕ ತಲುಪಿದ್ರು. ಮೆಟ್ರೋ ಪ್ಲಾಟ್‌ಫಾರ್ಮ್‌ನಿಂದ ಮತ್ತು ಆಟೋ ಒಳಗಿನಿಂದ ವಿಡಿಯೋಗಳು ಮತ್ತು ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

ಮೆಟ್ರೋ ರೈಲು ಪ್ರಯಾಣದ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಂಡ ಹೇಮಾ, ಮೆಟ್ರೋ ಅನುಭವದ ನಂತರ, ಡಿಎನ್ ನಗರದಿಂದ ಜುಹುಗೆ ಆಟೋದಲ್ಲಿ ಹೋಗಲು ನಿರ್ಧರಿಸಿದೆ. ಅದು ನೆರವೇರಿತು ಕೂಡ. ನನ್ನ ಮನೆಗೆ ಆಟೋದಲ್ಲಿ ಬಂದಿಳಿದ ಕೂಡಲೇ ಭದ್ರತಾ ಸಿಬ್ಬಂದಿ ಒಂದುಕ್ಷಣ ದಿಗ್ಭ್ರಮೆಗೊಂಡಿದ್ದಾರೆ. ಅವರಿಗೆ ನಿಜಕ್ಕೂ ಇದನ್ನು ನಂಬಲಾಗಲಿಲ್ಲ. ಒಟ್ಟಿನಲ್ಲಿ, ನನಗೆ ಸಾರ್ವಜನಿಕ ಮೆಟ್ರೋದಲ್ಲಿ ಪ್ರಯಾಣಿಸಿ ಅದ್ಭುತವಾದ, ಆನಂದದಾಯಕ ಅನುಭವವಾಯ್ತು ಎಂದು ಹೇಳಿದ್ದಾರೆ.

ಹೇಮಾ ಅವರು ಸಾಮಾನ್ಯವಾಗಿ ಕಾರಿನಲ್ಲಿ ತನ್ನ ಗಮ್ಯಸ್ಥಾನವನ್ನು ತಲುಪಲು ಎರಡು ಗಂಟೆಗಳ ಕಾಲ ತೆಗೆದುಕೊಳ್ಳುತ್ತಾರಂತೆ. ಆದರೆ, ಮೆಟ್ರೋ ಪ್ರಯಾಣವು ವೇಗವಾಗಿರುತ್ತದೆ. ಕಾರಿಗಿಂತ ಸಾರ್ವಜನಿಕ ವಾಹನದಲ್ಲಿ ಪ್ರಯಾಣಿಸಿ ಬಹಳ ಬೇಗ ನನ್ನ ಮನೆ ತಲುಪಿದೆ ಎಂದು ಅವರು ಸಂತಸ ಹಂಚಿಕೊಂಡರು. ಅಂದಹಾಗೆ, ಮೆಟ್ರೋದೊಳಗೆ ಅಭಿಮಾನಿಗಳು ಹೇಮಾ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಲು ಸಾಲುಗಟ್ಟಿ ನಿಂತಿದ್ದರು.

ಹೇಮಾ ಅವರು ಮೆಟ್ರೋದಿಂದ ಕೆಳಗಿಳಿದ ನಂತರ ಆಟೋ ಸವಾರಿ ಮಾಡಿದ್ದಾರೆ. ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ಅವರು, ನಾನು ಆಟೋದೊಳಗಿಂದ ಚಿತ್ರೀಕರಿಸಿದ ವಿಡಿಯೋ ಇದಾಗಿದೆ. ನಾನು ಸಂಪೂರ್ಣವಾಗಿ ಆನಂದಿಸಿದೆ ಎಂದು ಬರೆದಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ, ಹೇಮಾ ಮಾಲಿನಿ ಕೊನೆಯದಾಗಿ 2020 ರ ರಾಜ್‌ಕುಮಾರ್ ರಾವ್ ಮತ್ತು ರಾಕುಲ್ ಪ್ರೀತ್ ಸಿಂಗ್ ಚಲನಚಿತ್ರ ಶಿಮ್ಲಾ ಮಿರ್ಚಿಯಲ್ಲಿ ಅಭಿನಯಿಸಿದ್ದರು.

https://youtu.be/z-bkQSXh4vw

https://twitter.com/dreamgirlhema/status/1645824415022850049?ref_src=twsrc%5Etfw%7Ctwcamp%5Etweetembed%7Ctwterm%5E1645824415022850049%7Ctwgr%5E7f797028d4d8c476761e921c7757783eeada506e%7Ctwcon%5Es1_&ref_url=https%3A%2F%2Findianexpress.com%2Farticle%2Fentertainment%2Fbollywood%2Fhema-malini-travels-by-metro-and-auto-to-reach-home-shares-footage-fans-react-pics-videos-8551723%2F%3Futm_source%3Dmsnutm_medium%3DReferral

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read