ಸೋಮವಾರ ರಾತ್ರಿ ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ದುರ್ಗಾ ಪೂಜೆ ಆಚರಣೆಗೆ ಕೆಲವೇ ದಿನಗಳ ಮೊದಲು ಸುರಿದ ಮಳೆಯ ಪರಿಣಾಮ ಐದು ಜನರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದರು.
ನಗರದ ವಿಶಾಲ ಪ್ರದೇಶಗಳು ಮುಳುಗಿ ಹೋಗಿರುವುದನ್ನು ದೃಶ್ಯಗಳು ತೋರಿಸಿವೆ, ರಸ್ತೆಗಳು ನೀರಿನಲ್ಲಿ ಮುಳುಗಿ ಅನೇಕ ಮನೆಗಳು ಮತ್ತು ವಸತಿ ಸಂಕೀರ್ಣಗಳಿಗೆ ನೀರು ನುಗ್ಗಿದೆ.
ಭಾರತ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಅಲಿಪೋರ್ನಲ್ಲಿ ಬೆಳಿಗ್ಗೆ 5.30 ರವರೆಗೆ 239 ಮಿ.ಮೀ ಮಳೆಯಾಗಿದ್ದು, ಬೆಳಿಗ್ಗೆ 6.30 ರ ವೇಳೆಗೆ ಅದು 247.4 ಮಿ.ಮೀ.ಗೆ ಏರಿದೆ. ಸೆಪ್ಟೆಂಬರ್ 22 ರಂದು ಬೆಳಿಗ್ಗೆ 6.30 ರಿಂದ ಸೆಪ್ಟೆಂಬರ್ 23 ರಂದು ಬೆಳಿಗ್ಗೆ 6.30 ರವರೆಗೆ 24 ಗಂಟೆಗಳ ಅವಧಿಯಲ್ಲಿ 247.5 ಮಿ.ಮೀ ಮಳೆಯಾಗಿದೆ ಎಂದು ಐಎಂಡಿ ದೃಢಪಡಿಸಿದೆ.
Massive Rains in #kolkata since the last 3 hours! Major areas #flooded like never before. Heavy spell of #Rainfall in the city right before #DurgaPuja
— Murtaza Khambaty (@MurtazaKhambaty) September 22, 2025
Stay safe everybody!#cyclone #cloudburst pic.twitter.com/VUuoQkkxgC