ನಾಯಿಯ ಜೊತೆ ರೈಲಿನಲ್ಲಿ ಮಾಲೀಕನ ಪಯಣ: ಕ್ಯೂಟ್​ ವಿಡಿಯೋಗೆ ನೆಟ್ಟಿಗರು ಫಿದಾ

ಲೋಕಲ್ ರೈಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಪುಟ್ಟ ನಾಯಿಮರಿಯನ್ನು ಬ್ಯಾಗ್‌ ನಲ್ಲಿ ತೆಗೆದುಕೊಂಡು ಹೋಗುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಹೃದಯಸ್ಪರ್ಶಿ ವೀಡಿಯೋ ಅಂತರ್ಜಾಲದಲ್ಲಿ ಮನ ಗೆಲ್ಲುತ್ತಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೆಟ್ ಟೌನ್ ಎಂಬ ಪುಟವು ಹಂಚಿಕೊಂಡ ವೀಡಿಯೊದಲ್ಲಿ ಒಬ್ಬ ವ್ಯಕ್ತಿಯು ತನ್ನ ಲ್ಯಾಬ್ರಡಾರ್ ನಾಯಿಯನ್ನು ಹೊತ್ತೊಯ್ಯುತ್ತಿರುವುದನ್ನು ನೋಡಬಹುದು. ಇಬ್ಬರೂ ನಿದ್ರೆ ಮಾಡುತ್ತಿದ್ದಾರೆ. ನಾಯಿ ಚೀಲದೊಳಗೆ ಆರಾಮವಾಗಿ ಮಲಗಿತ್ತು, ಸ್ವಲ್ಪ ಸಮಯದ ನಂತರ ಅದು ಎಚ್ಚರಗೊಂಡು ಸುತ್ತಲೂ ಮಿಕಿಮಿಕಿ ನೋಡುವುದನ್ನು ವಿಡಿಯೋದಲ್ಲಿ ಕಾಣಬಹುದು.

ಈ ವಿಡಿಯೋ 21 ಮಿಲಿಯನ್ ವೀಕ್ಷಣೆ ಕಂಡಿದ್ದು, ನಾಯಿಯ ಮುದ್ದುಮೊಗಕ್ಕೆ ಜನರು ಫಿದಾ ಆಗಿದ್ದಾರೆ. ಆದರೆ ನಾಯಿಗಳನ್ನು ಈ ರೀತಿ ರೈಲಿನಲ್ಲಿ ಕೊಂಡೊಯ್ಯುವುದು ಸರಿಯಲ್ಲ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಕೆಲವರು ನಾಯಿಗೂ, ಮನುಷ್ಯರಿಗೂ ಇರುವ ಅಗಾಧ ನಂಟನ್ನು ಬಣ್ಣಿಸಿದ್ದಾರೆ. ಹಲವು ಕಮೆಂಟಿಗರು ತಮ್ಮ ಮುದ್ದು ನಾಯಿಯ ಜೊತೆಗಿನ ಸಂಬಂಧವನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ.

https://www.youtube.com/watch?v=VFx7ZTSkOCA

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read