ಪಶು ವೈದ್ಯರನ್ನು ಕಂಡು ಹೆದರಿದ ನಾಯಿಗೆ ಡಾಕ್ಟರ್ ಮಾಡಿದ್ದೇನು….? ಹೃದಯಸ್ಪರ್ಶಿ ವಿಡಿಯೋ ವೈರಲ್

ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ವೈದ್ಯರ ಪಾತ್ರ ಸಮಾಜದಲ್ಲಿ ಬಹು ಪ್ರಮುಖವಾಗಿದೆ. ರೋಗಿಯನ್ನು ಗುಣಪಡಿಸುವ ಮತ್ತು ಅವರನ್ನು ಆರೋಗ್ಯವಂತರನ್ನಾಗಿ ಮಾಡುವಲ್ಲಿ ಅವರ ಸಮರ್ಪಣೆ ಶ್ಲಾಘನೀಯ. ಪಶುವೈದ್ಯರು ಕೂಡ ತಮ್ಮ ಕಾರ್ಯವನ್ನು ಅಷ್ಟೇ ಸಮರ್ಪಣೆಯಿಂದ ಮಾಡುತ್ತಾರೆ. ಪಶುವೈದ್ಯರು ಮಾಡುವ ಸೇವೆ ಕೂಡ ಬಹಳ ದೊಡ್ಡದು.

ಹೌದು, ವೈದ್ಯರೆಂದರೇ ಪುಟ್ಟ ಮಕ್ಕಳು ಭಯಪಡುತ್ತಾರೆ. ಅವರು ಇಂಜೆಕ್ಷನ್ ಕೊಡುತ್ತಾರೆ ಎಂಬ ಭಯ ಪುಟ್ಟ ಮಕ್ಕಳಿಗೆ ಹೇಗೆ ಇದೆಯೋ ಅದೇ ರೀತಿ ಸಾಕು ಪ್ರಾಣಿಗಳಿಗೂ ಇದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ವೈದ್ಯರು ಹೆದರಿದ ನಾಯಿಯ ಹತ್ತಿರ ಹೋದ್ರೆ, ಶ್ವಾನವು ಭಯದಿಂದ ನಡುಗುತ್ತಾ ಮೂಲೆಯಲ್ಲಿ ಕುಳಿತಿದೆ. ಈ ಶ್ವಾನಕ್ಕೆ ಭಯ ಹೋಗಲಾಡಿಸಿದ ವೈದ್ಯರ ವಿಡಿಯೋ ವೈರಲ್ ಆಗಿದೆ.

ಶ್ವಾನದ ಭಯವನ್ನು ಹೋಗಲಾಡಿಸಲು ವೈದ್ಯರು ಕೊಂಚ ಸಮಯವನ್ನು ತೆಗೆದುಕೊಳ್ಳುತ್ತಾರೆ. ನಂತರ ಅವರು ನಾಯಿಯನ್ನು ತಬ್ಬಿಕೊಂಡು ಅದಕ್ಕೆ ಉಪಚಾರ ನೀಡಲು ಮುಂದಾಗಿದ್ದಾರೆ. ವೈದ್ಯರು ಶ್ವಾನವನ್ನು ತಬ್ಬಿಕೊಳ್ಳುತ್ತಿದ್ದಂತೆ ನಾಯಿ ನಿಧಾನವಾಗಿ ಆರಾಮದಾಯಕವಾಗುತ್ತದೆ. ನಾಯಿಯು ವೈದ್ಯರ ಮಡಿಲಲ್ಲಿ ಕುಳಿತು ಪ್ರೀತಿಯನ್ನು ಪಡೆಯುವುದರೊಂದಿಗೆ ವಿಡಿಯೋ ಕೊನೆಗೊಳ್ಳುತ್ತದೆ.

ಈ ನಾಯಿ ವೈದ್ಯರನ್ನು ಕಂಡು ಎಷ್ಟು ಹೆದರುತ್ತಿದೆ ಎಂಬುದನ್ನು ನೋಡಲು ಬೇಸರವೆನಿಸುತ್ತದೆ. ಆದರೆ, ವೈದ್ಯರು ಅದನ್ನು ನಿಭಾಯಿಸುವಲ್ಲಿ ಪರಿಪೂರ್ಣರಾಗಿದ್ದಾರೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ 9.2 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದ್ದು, ಟನ್ ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ನೆಟ್ಟಿಗರು ವೈದ್ಯರ ತಾಳ್ಮೆಯನ್ನು ಶ್ಲಾಘಿಸಿದ್ದಾರೆ.

https://twitter.com/Maluminse/status/1658809050673422337?ref_src=twsrc%5Etfw%7Ctwcamp%5Etweetembed%7Ctwterm%5E1658809050673422337%7Ctwgr%5Ecaac27fcd3c5c87d97431734b032512d9df5892e%7Ctwcon%5Es1_&ref_url=https%3A%2F%2Fd-1538829173502276336.ampproject.net%2F2304262219000%2Fframe.html

https://twitter.com/kk_3rr0r/status/1658799830800408577?ref_src=twsrc%5Etfw%7Ctwcamp%5Etweetembed%7Ctwterm%5E1658799830800408577%7Ctwgr%5E7104ecc8e680068f8fd8338f8adb900cdedb29fb%7Ctwcon%5Es1_&ref_url=https%3A%2F%2Fd-1538829173502276336.ampproject.net%2F2304262219000%2Fframe.html

https://twitter.com/RooseveltsRvnge/status/1658677733906436096?ref_src=twsrc%5Etfw%7Ctwcamp%5Etweetembed%7Ctwterm%5E1658677733906436096%7Ctwgr%5Eb0c4acb794e6f9e149eabe96ac7e7f0592aea85c%7Ctwcon%5Es1_&ref_url=https%3A%2F%2Fd-1538829173502276336.ampproject.net%2F2304262219000%2Fframe.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read