SHOCKING NEWS: ಮದುವೆಗೆ ಒಂದುದಿನ ಮೊದಲು ಹೃದಯಾಘಾತದಿಂದ ಮದುಮಗ ಸಾವು

ಬೆಳಗಾವಿ: ಮದುವೆಗೆ ಒಂದು ದಿನ ಮೊದಲು ಮದುಮಗ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝಂಜರವಾಡ ಆರ್.ಸಿ ಗ್ರಾಮದಲ್ಲಿ ನಡೆದಿದೆ.

31 ವರ್ಷದ ಸದಾಶಿವ ರಾಮಪ್ಪ ಮೃತ ಯುವಕ. ನಾಳೆ ಸೆ.5ರಂದು ಯುವಕನ ಮದುವೆ ನಿಶ್ಚಿಯವಾಗಿತ್ತು. ಮನೆಯಲ್ಲಿ ಮದುವೆಯ ಸಂಭ್ರಮ ಕಳೆಕಟ್ಟಿತ್ತು. ಮದುವೆ ತಯಾರಿಯಲ್ಲಿದ್ದ ಯುವಕ ಫೋನಿನಲ್ಲಿ ಮಾತನಾಡುತ್ತಿದ್ದ. ಈ ವೇಳೆ ಏಕಾಏಕಿ ಹೃದಯಾಘಾತವಾಗಿದ್ದು, ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.

ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲೇ ಯುವಕ ಉಸಿರು ಚಲ್ಲಿದ್ದಾನೆ. ಐಗುಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read