ಯುವತಿ ಸೌಂದರ್ಯಕ್ಕೆ ಮರುಳಾಗಿ ಮದುವೆಯಾದವನಿಗೆ ‌ʼಮೊದಲ ರಾತ್ರಿʼ ಯೇ ಶಾಕ್….!

ಯುವತಿಯ ಸೌಂದರ್ಯಕ್ಕೆ ಮರುಳಾಗಿ ಮದುವೆಯಾದ ವರನೊಬ್ಬ ಮೊದಲ ರಾತ್ರಿಯೇ ಕಂಗಾಲಾಗಿದ್ದಾನೆ. ಸುಂದರ ಕನಸುಗಳನ್ನು ಕಟ್ಟಿಕೊಂಡು ಹೋದ ವರನಿಗೆ ಶಾಕ್‌ ಆಗುವಂತಹ ಘಟನೆ ನಡೆದಿದ್ದು, ಇದೀಗ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ.

ಇಂತದೊಂದು ಘಟನೆ ಉತ್ತರ ಪ್ರದೇಶದ ಜಲೌನ್‌ನಲ್ಲಿ ಬೆಳಕಿಗೆ ಬಂದಿದ್ದು, ವರ ಅಷ್ಟೇ ಅಲ್ಲ ಕುಟುಂಬಸ್ಥರು ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ಜಲೌನ್‌ನಲ್ಲಿ, ಮದುವೆಯ ನಂತರ ಮೊದಲ ರಾತ್ರಿಯ ವರನ ಕನಸು ನನಸಾಗಿಲ್ಲ. ಹೌದು, ಯುವತಿಯ ಸೌಂದರ್ಕ್ಕೆ ಮರುಳಾಗಿ ಮದುವೆಯಾದ ವರ ಮೊದಲ ರಾತ್ರಿ ಕೊಠಡಿಗೆ ಹೋಗಿ ಬೆಚ್ಚಿಬಿದ್ದಿದ್ದಾನೆ.

ಮದುವೆ ಸಂದರ್ಭದಲ್ಲಿ ವಧುವಿಗೆ ನೀಡಿದ್ದ ಚಿನ್ನಾಭರಣಗಳು ಮಾತ್ರವಲ್ಲದೇ ಹಣ ಸಹ ಎತ್ತಿಕೊಂಡು ಪರಾರಿಯಾಗಿದ್ದಾಳೆ. ಆಕೆಗಾಗಿ ಹುಡುಕಾಡಿದಾಗ ಒಂದು ಪರ್ಸ್‌ ಸಿಕ್ಕಿದ್ದು, ಅದರಲ್ಲಿ ಆಕೆಯ ಹೆಸರು ಬೇರೆಯದ್ದೇ ಇತ್ತು. ಹುಡುಗಿ ನೋಡಿದಾಗ ಆಕೆಯ ಹೆಸರನ್ನು ನೇಹಾ ಯಾದವ್‌ ಎಂದು ಹೇಳಿಕೊಂಡಿದ್ದು, ಪೂರ್ವಾಪರ ವಿಚಾರಿಸದೆ ಮದುವೆಯಾದ ತಪ್ಪಿಗೆ ಈಗ ವರ ಪರಿತಪಿಸುತ್ತಿದ್ದಾನೆ.

ಆಕೆಗೆ ಈಗಾಗಲೇ ಹಲವು ಬಾರಿ ಮದುವೆಯಾಗಿದೆ ಎನ್ನಲಾಗಿದ್ದು, ತಂಡವೊಂದನ್ನು ಕಟ್ಟಿಕೊಂಡಿದ್ದ ಈಕೆ ಮದುವೆಯಾದ ಬಳಿಕ ಚಿನ್ನಾಭರಣ, ಹಣ ದೋಚುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದಳು. ವಧು ಮತ್ತವಳ ತಂಡಕ್ಕೆ ಈಗ ಟಾರ್ಗೆಟ್‌ ಆಗಿದ್ದ ವೀರ್‌ ಸಿಂಗ್‌ ಈಗ ಪತ್ನಿಯೂ ಇಲ್ಲದೆ ಹಣ, ಆಭರಣ ಕಳೆದುಕೊಂಡು ಪೆಚ್ಚಾಗಿದ್ದಾನೆ. ಪ್ರಕರಣ ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ನೇಹಾ ಯಾದವ್‌ ಮತ್ತವಳ ತಂಡದ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read