ಉದ್ಯೋಗಿಗಳಿಗೆ ಬಾಯಿಗೆ ಬಂದಂತೆ ಬೈದ ಮ್ಯಾನೇಜರ್; ವಿಡಿಯೋ ವೈರಲ್

ಓಲಾ ಸಿಇಓ ಭವಿಶ್ ಅಗರ್ವಾಲ್ ಉದ್ಯೋಗಿಗಳಿಗೆ ಪಂಜಾಬಿ ಭಾಷೆಯಲ್ಲಿ ಬೈದಿದ್ದರಿಂದ ಹಿಡಿದು ಟ್ವಿಟರ್‌ ಉದ್ಯೋಗಿಗಳನ್ನು ಕಚೇರಿಯಲ್ಲೇ ಮಲಗುವಂತೆ ಮಾಡಿದ ಎಲಾನ್ ಮಸ್ಕ್‌ವರೆಗೂ ಬಾಸ್‌ಗಳ ವರ್ತನೆಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸಾಕಷ್ಟು ಟೀಕೆಗೆ ಗುರಿಯಾಗುತ್ತಲೇ ಇರು‌ತ್ತದೆ.

ಕೋವಿಡ್ ನಂತರದ ಕಾಲಘಟ್ಟದಲ್ಲಿ ವಿಡಿಯೋ ಕಾಲ್‌ಗಳು ಕಚೇರಿಯ ಕೆಲಸದ ಅವಿಭಾಜ್ಯ ಅಂಗವಾಗಿದ್ದು, ಈ ವೇಳೆ ನಡೆಯುವ ಕೆಲ ಆಸಕ್ತಿಕರ ಘಟನೆಗಳ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಬಲುಬೇಗ ವೈರಲ್ ಆಗುತ್ತವೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ನ ಕ್ಲಸ್ಟರ್‌ ಮುಖ್ಯಸ್ಥರೊಬ್ಬರು ರೆಕಾರ್ಡ್ ಆಗುತ್ತಿರುವ ವಿಡಿಯೋ ಕಾಲ್ ಒಂದರಲ್ಲೇ ತಮ್ಮ ಕಿರಿಯ ಸಹೋದ್ಯೋಗಿಗೆ ಬಾಯಿಗೆ ಬಂದಂತೆ ಬೈಯ್ಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ವಿಮೆ ಹಾಗೂ ಬ್ಯಾಂಕಿಂಗ್‌ನ ಇತರೆ ಸೇವೆಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಗ್ರಾಹಕರನ್ನು ತಾರದೇ ಇರುವ ಕಾರಣ ಎಚ್‌ಡಿಎಫ್‌ಸಿಯ ಕೋಲ್ಕತ್ತಾ ಕ್ಲಸ್ಟರ್‌ ಮುಖ್ಯಸ್ಥ ಪುಷ್ಪಾಲ್ ರಾಯ್ ಬೆಂಗಾಲಿಯಲ್ಲಿ ತಮ್ಮ ಕಿರಿಯ ಸಹೋದ್ಯೋಗಿಗಳಿಗೆ ಬಯ್ದಿದ್ದು, ಪ್ರತಿನಿತ್ಯ ಕನಿಷ್ಠ 75 ಸ್ಥಿರ ಠೇವಣಿಗಳ ಮಾರಾಟ ಮಾಡಲು ಅವರಿಗೆ ಆಗ್ರಹಿಸಿದ್ದಾರೆ.

ವಿಡಿಯೋ ವೈರಲ್ ಆಗುತ್ತಲೇ ಎಚ್‌ಡಿಎಫ್‌ಸಿ ಬ್ಯಾಂಕ್ ಈ ಸಂಬಂಧ ತನಿಖೆಗೆ ಆದೇಶಿಸಿದ್ದು, ಕ್ಲಸ್ಟರ್‌ ಮ್ಯಾನೇಜರ್‌ರನ್ನು ಅಮಾನತುಗೊಳಿಸಿದೆ. ಕೆಲಸದ ಸ್ಥಳದಲ್ಲಿ ಮನಬಂದಂತೆ ವರ್ತಿಸುವುದನ್ನು ತಾನು ಯಾವ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್‌ಡಿಎಫ್‌ಸಿ ಇದೇ ವೇಳೆ ಸ್ಪಷ್ಟಪಡಿಸಿದೆ.

ಬಾಸ್‌ಗಳ ಅತಿರೇಕದ ವರ್ತನೆಗಳಿಂದ ಬೇಸತ್ತು ಬಹಳಷ್ಟು ಭಾರತೀಯ ಉದ್ಯೋಗಿಗಳು ತಮ್ಮ ಕೆಲಸಗಳಿಗೆ ರಾಜೀನಾಮೆ ಕೊಡುತ್ತಿದ್ದಾರೆ ಎಂದು ಇತ್ತೀಚಿನ ಸರ್ವೇಯೊಂದರಲ್ಲಿ ಬೆಳಕಿಗೆ ಬಂದಿತ್ತು.

https://twitter.com/vishnuguptuvach/status/1665669404460187649?ref_src=twsrc%5Etfw%7Ctwcamp%5Etweetembed%7Ctwterm%5E1665669404460187649%7Ctwgr%5E010cdc01dcac553bcac43ddb5ad7140dcbd3c219%7Ctwcon%5Es1_&ref_url=https%3A%2F%2Fwww.freepressjournal.in%2Fbusiness%2Fwatch-hdfc-bank-employee-abuses-junior-during-video-meet-suspended-for-unruly-behaviour

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read