H.D ಕುಮಾರಸ್ವಾಮಿ ಮಾತುಗಳಿಗೆ ಅವರ ಪಕ್ಷದಲ್ಲೇ ನಯಾಪೈಸೆ ಕಿಮ್ಮತ್ತಿಲ್ಲ : ಕಾಂಗ್ರೆಸ್ ವ್ಯಂಗ್ಯ

ಬೆಂಗಳೂರು : ಮಾಜಿ ಸಿಎಂ ಕುಮಾರಸ್ವಾಮಿ ಮಾತುಗಳಿಗೆ ಅವರ ಪಕ್ಷದಲ್ಲಿ ನಯಾಪೈಸೆ ಕಿಮ್ಮತ್ತಿಲ್ಲ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ವ್ಯಂಗ್ಯವಾಗಿದೆ.

ಕುಮಾರಸ್ವಾಮಿಯವರು ರಾಜಕೀಯ ತೀರ್ಮಾನ ತೆಗೆದುಕೊಳ್ಳಲು ಜೆಡಿಎಸ್ ಪಕ್ಷದ ಯಾವುದೇ ಪದಾಧಿಕಾರಿ ಅಲ್ಲ, ಅಪ್ಪನ ಹೆಸರಿನಲ್ಲಿ ನಡೆಸುವ ದರ್ಬಾರು! ಪ್ರಶ್ನೆ ಮಾಡಿದವರನ್ನ ಹೊರ ದಬ್ಬುವ ಚಾಳಿ! ರಾಜ್ಯ ರಾಜಕೀಯ ವ್ಯಾಪಾರದ ದಲ್ಲಾಳಿ! ಕುಮಾರಸ್ವಾಮಿಯವರ ಮಾತುಗಳಿಗೆ, ತೀರ್ಮಾನಗಳಿಗೆ ಅವರದ್ದೇ ಪಕ್ಷದಲ್ಲಿ ನಯಾಪೈಸೆ ಕಿಮ್ಮತ್ತಿಲ್ಲ. ಹೀಗಿರುವಾಗ ಕಾಂಗ್ರೆಸ್ ಪಕ್ಷ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವೇ?! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಇತ್ತೀಚಿನ ದಿನಗಳಲ್ಲಿ ಹೊರಬರುತ್ತಿರುವ ಸತ್ಯ ಏನೆಂದರೆ ಮೈತ್ರಿ ಇರುವುದು ಅಮಿತ್ ಶಾ ಹಾಗೂ ಕುಮಾರಸ್ವಾಮಿ ನಡುವೆ ಹೊರತು ಬಿಜೆಪಿ ಜೆಡಿಎಸ್ ನಡುವೆ ಅಲ್ಲ!ಇತ್ತ ಬಿಜೆಪಿ ನಾಯಕರಿಗೂ ಮೈತ್ರಿ ಬಗ್ಗೆ ಅಸಮಧಾನ, ಅತ್ತ ಒರಿಜಿನಲ್ ಜೆಡಿಎಸ್ ನವರಿಗೂ ಅಸಮಧಾನ.ಇಂತಹದ್ದನ್ನು ಮೈತ್ರಿ ಎನ್ನಲಾದೀತೆ?ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ನಾನೇ ಜೆಡಿಎಸ್ ರಾಜ್ಯಾಧ್ಯಕ್ಷ ಪಕ್ಷದ ತೀರ್ಮಾನಗಳನ್ನು ನಾನೇ ತೆಗೆದುಕೊಳ್ಳುವುದು ಎಂದು ಕುಮಾರಸ್ವಾಮಿಯವರಿಗೆ ನೀವು “ಲೆಕ್ಕಕ್ಕಿಲ್ಲ” ಎಂದು ಹೇಳಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಕುಮಾರಸ್ವಾಮಿಯವರದ್ದು ಅಬ್ಬೇಪಾರಿ ಸ್ಥಿತಿಗಿಂತ ಭಿನ್ನವಾಗಿಲ್ಲ! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

https://twitter.com/INCKarnataka/status/1714140938489225466

 

https://twitter.com/INCKarnataka/status/1714162522905801000

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read