ಹಾವೇರಿ: ಅಕ್ಕನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬನನ್ನು ತಮ್ಮ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ನಡೆದಿದೆ.
ಕಾಕೋಳ ಗ್ರಾಮದ ದಿಲೀಪ್ ಹಿತ್ತಲಮನಿ (47) ಕೊಲೆಯಾದ ವ್ಯಕ್ತಿ. ರಾಜಯ್ಯ ದಿಲೀಪ್ ನನ್ನು ಕೊಂದಿರುವ ಆರೋಪಿ. ದೀಲೀಪ್, ರಾಜಯ್ಯನ ಅಕ್ಕನ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಅಕ್ಕನ ಜೊತೆಗಿದ್ದಾಗಲೇ ದಿಲೀಪ್ ಸಿಕ್ಕಿಬಿದ್ದಿದ್ದು, ರೊಚ್ಚಿಗೆದ್ದ ಸಹೋದರ ದಿಲೀಪ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದಿದ್ದಾನೆ.
ರಾಣೆಬೆನ್ನೂರು ಗ್ರಾಮಾಂತರ ಠಾಣೆ ಪೊಲೀಸರು ರಾಜಯ್ಯನನ್ನು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್ ಪಿ ಯಶೋಧಾ ವಂಟಗೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ರಾಜಯ್ಯ ಸಹೋದರು ತನಗೂ ದಿಲೀಪ್ ಗೂ ಯಾವುದೇ ಅಕ್ರಮ ಸಂಬಂಧವಿರಲಿಲ್ಲ ಎಂದಿದ್ದಾರೆ.