ʼಮೈಕ್ರೋವೇವ್ʼ ನಲ್ಲಿ ಆಹಾರ ಬಿಸಿ ಮಾಡಿ ತಿಂತಿದ್ದೀರಾ…..? ಹಾಗಾದ್ರೆ ಮೊದಲು ಈ ಸುದ್ದಿ ಓದಿ

ನೀವು ನಿಮ್ಮ ಆಹಾರವನ್ನು ಮೈಕ್ರೋವೇವ್ ನಲ್ಲಿ ಬಿಸಿ ಮಾಡಿ ತಿಂತಿದ್ದೀರಾ…? ಹಾಗಾದ್ರೆ ಅದನ್ನ ನಿಲ್ಲಿಸಿ. ನಾವು ಹೇಳೋ ವಿಷಯ ಕೇಳಿದ್ರೆ ನೀವು ಇನ್ನ್ಮುಂದೆ ಮೈಕ್ರೋವೇವ್ ಸಹವಾಸಕ್ಕೆ ಹೋಗಲ್ಲ.

ಹೌದು, ಮೈಕ್ರೋವೇವ್ ನಲ್ಲಿ ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸಿ ಆಹಾರ ಬಿಸಿ ಮಾಡುವುದರಿಂದ ಬಂಜೆತನ, ಸ್ಥೂಲಕಾಯ, ಮಧುಮೇಹ, ಕ್ಯಾನ್ಸರ್ ನಂತಹ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ತಿಳಿಸಿದ್ದಾರೆ.

ಮೈಕ್ರೋವೇವ್ ನಲ್ಲಿ ಪ್ಲಾಸ್ಟಿಕ್ ಪಾತ್ರೆಗಳನ್ನು ಇಟ್ಟಾಗ ಅವು ಬಿಸಿಯಾಗಿ ಶೇಕಡಾ 95 ರಷ್ಟು ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ. ಈ ಆಹಾರವನ್ನು ಸೇವಿಸುವುದರಿಂದ ಬಂಜೆತನದ ಜೊತೆಗೆ ಅಧಿಕ ರಕ್ತದೊತ್ತಡ ಮತ್ತು ಮೆದುಳು ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸುವ ಸಾಧ್ಯತೆಯಿದೆ ಅಂತಾ ಹೇಳಲಾಗ್ತಿದೆ.

ಪ್ಲಾಸ್ಟಿಕ್ ಕಂಟೇನರ್ಗಳಲ್ಲಿ ಅತ್ಯಂತ ಅಪಾಯಕಾರಿ ರಾಸಾಯನಿಕಗಳಾದ ಬಿಸ್ಪೆನಾಲ್ ಎ ಅಂದ್ರೆ ಬಿಪಿಎ ಮತ್ತು ಪಾಥಲೇಟ್ ಇರುತ್ತದೆ. ಮೈಕ್ರೋವೇವ್ ನಲ್ಲಿ ಬಿಸಿ ಮಾಡಿದ ಆಹಾರ ಸೇವಿಸುವುದರಿಂದಾಗಿ ಬಿಪಿಎ ನಮ್ಮ ಆಹಾರದಲ್ಲಿ ಸೇರಿ ಬಂಜೆತನ, ಹಾರ್ಮೋನ್ ಗಳಲ್ಲಿ ಬದಲಾವಣೆ , ಮತ್ತು ವಿವಿಧ ರೀತಿಯ ಕ್ಯಾನ್ಸರ್ ಸಮಸ್ಯೆಗಳು ಎದುರಾಗಲಿವೆ.

ನಿತ್ಯ ಜೀವನದಲ್ಲಿ ಆದಷ್ಟು ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು. ಮೈಕ್ರೋವೇವ್ ನಲ್ಲಿ ಆಹಾರ ಬಿಸಿ ಮಾಡಲು ಪ್ಲಾಸ್ಟಿಕ್ ಪಾತ್ರೆ ಬದಲು ಗಾಜನ್ನು ಬಳಸಿ   ಅಲ್ಲದೆ ಪ್ಲಾಸ್ಟಿಕ್ ಬಾಕ್ಸ್ ಗಳಲ್ಲಿ ಆಹಾರ ಶೇಖರಿಸಿಡುವ ಬದಲು, ಗಾಜಿನ ಕಂಟೇನರ್ಗಳಲ್ಲಿ ಆಹಾರ ಇಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read