ಮದುವೆ ನಂತರ ತೂಕ ಹೆಚ್ಚಾಗಿದೆಯಾ…..? ಹೀಗೆ ಮಾಡಿ ವೆಯ್ಟ್ ಲಾಸ್

ಮದುವೆ ನಂತರ ಸಾಮಾನ್ಯವಾಗಿ ಎಲ್ಲರಲ್ಲೂ ತೂಕ ಹೆಚ್ಚಾಗುತ್ತದೆ. ಮನೆ ಸಂಭಾಳಿಸುವುದರ ಜೊತೆಗೆ ಕಚೇರಿ ಕೆಲಸವೂ ಸೇರಿಕೊಂಡು ಆರೋಗ್ಯದ ಕಡೆಗೆ ಗಮನ ಹರಿಸಲು ಸಮಯವೇ ಸಿಗದಂತಾಗುತ್ತದೆ.

ನಿಮ್ಮ ದೇಹದ ಕಡೆಗೆ ನೀವು ಗಮನವನ್ನೇ ಕೊಡುವುದಿಲ್ಲ, ನಿಯಮಿತ ವ್ಯಾಯಾಮವನ್ನೂ ಮಾಡುವುದಿಲ್ಲ.

ಹಾಗಾಗಿ ದೇಹದ ತೂಕ ಹೆಚ್ಚುತ್ತಲೇ ಹೋಗುತ್ತದೆ. ಆದ್ರೆ ತೂಕ ಕಡಿಮೆ ಮಾಡಿಕೊಳ್ಳಲು ಅತ್ಯಂತ ಸುಲಭವಾದ ವಿಧಾನಗಳಿವೆ. ತೂಕ ಇಳಿಸಲು ನಿಯಮಿತ ಲೈಂಗಿಕ ಸಂಬಂಧ ಅತ್ಯಂತ ಸಹಕಾರಿ ಎನ್ನುತ್ತಾರೆ ವಿಜ್ಞಾನಿಗಳು. 25 ನಿಮಿಷಗಳ ಕಾಲ ಸೆಕ್ಸ್ ಮಾಡಿದ್ರೆ 100 ಕ್ಯಾಲೋರಿ ಬರ್ನ್ ಆಗುತ್ತದೆ.

ಸಾಮಾನ್ಯವಾಗಿ ಮಾಡಿದ ಅಡುಗೆ ಸ್ವಲ್ಪ ಜಾಸ್ತಿಯಾದ್ರೆ ಅದು ವೇಸ್ಟ್ ಆಗಬಾರ್ದು ಅನ್ನೋ ಕಾರಣಕ್ಕೆ ಲಿಮಿಟ್ ಮೀರಿ ತಿಂದುಬಿಡುತ್ತೇವೆ. ಇದರಿಂದ ನಿಮ್ಮ ತೂಕ ಹೆಚ್ಚಾಗುತ್ತದೆ. ಹಾಗಾಗಿ ಓವರ್ ಡಯಟ್ ಮಾಡಬೇಡಿ. ಮದುವೆಯ ನಂತರ ಊಟ, ಉಪಹಾರಕ್ಕೆ ಸ್ನೇಹಿತರು, ಸಂಬಂಧಿಕರ ಮನೆಯಿಂದ ಆಹ್ವಾನ ಬರುತ್ತದೆ.

ಅಲ್ಲಿ ಮಸಾಲೆಯುಕ್ತ ಪದಾರ್ಥಗಳನ್ನು ಹೆಚ್ಚು ಸೇವಿಸುತ್ತೀರಿ. ಅಂತಹ ತಿನಿಸುಗಳನ್ನು ಆದಷ್ಟು ಅವಾಯ್ಡ್ ಮಾಡಿ. ಪ್ರತಿನಿತ್ಯ ವ್ಯಾಯಾಮ ಮಾಡಿ, ಒಬ್ಬರೇ ಮಾಡಲು ಬೇಸರ ಎನಿಸಿದ್ರೆ ನಿಮ್ಮ ಸಂಗಾತಿಯ ಜೊತೆಗೆ ವರ್ಕೌಟ್ ಮಾಡಬಹುದು.  ಸ್ವಿಮ್ಮಿಂಗ್ ಅಥವಾ ಡಾನ್ಸ್ ಕ್ಲಾಸ್ ಗೆ ಸೇರಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read