BREAKING NEWS: ಟ್ರ್ಯಾಕ್ಟರ್ -ಕ್ಯಾಂಟರ್ ಡಿಕ್ಕಿ; ಭೀಕರ ಅಪಘಾತದಲ್ಲಿ 5 ಜನ ಸಾವು

ಹತ್ರಾಸ್: ಉತ್ತರ ಪ್ರದೇಶದ ಹತ್ರಾಸ್‌ ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸಹಪೌ ಪೊಲೀಸ್ ಠಾಣೆ ಪ್ರದೇಶದಲ್ಲಿ ನಿನ್ನೆ ರಾತ್ರಿ ಟ್ರ್ಯಾಕ್ಟರ್ ಟ್ರಾಲಿ ಮತ್ತು ಡಂಪರ್ ನಡುವೆ ಡಿಕ್ಕಿ ಸಂಭವಿಸಿ ಐವರು ಸಾವನ್ನಪ್ಪಿದ್ದಾರೆ. 10ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಸದಾಬಾದ್-ಜಲೇಸರ್ ರಸ್ತೆಯ ಸಹಪೌ ಪ್ರದೇಶದ ನಲ್ಗಾ ಬ್ರಾಹ್ಮಣ ಬಳಿ ಶುಕ್ರವಾರ ತಡರಾತ್ರಿ ಭಕ್ತರು ತುಂಬಿದ್ದ  ಟ್ರಾಕ್ಟರ್ ಗೆ ಕ್ಯಾಂಟರ್‌ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿದೆ. ಕ್ಯಾಂಟರ್ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಅಪಘಾತದಲ್ಲಿ ಸುಮಾರು 12 ಭಕ್ತರು ಗಾಯಗೊಂಡಿದ್ದಾರೆ. ಈ ಅಪಘಾತದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಆಗ್ರಾ ಮತ್ತು ಅಲಿಗಢ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ.

ಇಟಾ ಜಿಲ್ಲೆಯ ಸಕ್ರೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ಗಧಿಯಾ ಮೌಜ್‌ಪುರ ಗ್ರಾಮದಿಂದ ಶುಕ್ರವಾರ ರಾತ್ರಿ ಭಕ್ತರಿಂದ ತುಂಬಿದ ಟ್ರ್ಯಾಕ್ಟರ್ ಮಥುರಾ-ವೃಂದಾವನಕ್ಕೆ ಹೋಗುತ್ತಿತ್ತು. ಆಗ್ರಾ, ಫಿರೋಜಾಬಾದ್ ಪ್ರದೇಶದ ಅವರ ಸಂಬಂಧಿಕರು ಸಹ ಗ್ರಾಮಸ್ಥರೊಂದಿಗೆ ಬಂದಿದ್ದರು.

ಸದಾಬಾದ್‌ನಿಂದ ಬರುತ್ತಿದ್ದ ಕ್ಯಾಂಟರ್ ಜಲೇಸರ್-ಸದಾಬಾದ್ ರಸ್ತೆಯ ಸಹಾಪೌ ಪ್ರದೇಶದ ನಾಗ್ಲಾ ಬ್ರಾಹ್ಮಣ ಬಳಿ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಕ್ಯಾಂಟರ್ ಚಾಲಕ ವಾಹನವನ್ನು ಅಲ್ಲಿಂದ ತೆಗೆದುಕೊಂಡು ಹೋಗಿದ್ದಾನೆ. ಇಲ್ಲಿ ಡಿಕ್ಕಿಯಾದ ನಂತರ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಟ್ರಾಲಿ ರಸ್ತೆ ಬದಿಗೆ ಉರುಳಿದೆ. ಅದರಲ್ಲಿ 25ಕ್ಕೂ ಹೆಚ್ಚು ಮಂದಿ ಇದ್ದರು ಎಂದು ಪೊಲೀಸರು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read