ದ್ವೇಷಪೂರಿತ ಭಾಷಣ:‌ ಗುಜರಾತ್‌ ಪೊಲೀಸರಿಂದ ಬಲಪಂಥೀಯ ಕಾರ್ಯಕರ್ತೆ​ ಅರೆಸ್ಟ್

ಗುಜರಾತ್: ಉನಾ ಪಟ್ಟಣದಲ್ಲಿ ಏಪ್ರಿಲ್ 1 ರಂದು ನಡೆದಿದ್ದ ಕೋಮು ಘರ್ಷಣೆಗೆ ಕಾರಣವಾದ ದ್ವೇಷಪೂರಿತ ಭಾಷಣ ಆರೋಪದ ಮೇಲೆ ಬಲಪಂಥೀಯ ಕಾರ್ಯಕರ್ತೆ ಕಾಜಲ್ ಹಿಂದೂಸ್ತಾನಿ ಅವರನ್ನು ಗಿರ್ ಸೋಮನಾಥ್ ಜಿಲ್ಲೆಯಲ್ಲಿ ಭಾನುವಾರ ಬಂಧಿಸಲಾಗಿದೆ.

ಉನಾದಲ್ಲಿ ಕಾಜಲ್ ಹಿಂದೂಸ್ತಾನಿ ಪೊಲೀಸರ ಮುಂದೆ ಶರಣಾದ ನಂತರ ಆಕೆಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಮಾರ್ಚ್ 30 ರಂದು ರಾಮ ನವಮಿಯಂದು ವಿಎಚ್‌ಪಿ ಆಯೋಜಿಸಿದ್ದ ಹಿಂದೂ ಸಮುದಾಯದ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಇವರ ಮೇಲಿದೆ.

ಇದಾದ ಎರಡು ದಿನದ ನಂತರ ಹಿಂದೂಸ್ತಾನಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295 ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶ) ಅಡಿಯಲ್ಲಿ ಏಪ್ರಿಲ್ 2 ರಂದು ಎಫ್ಐಆರ್ ದಾಖಲಿಸಲಾಗಿದೆ.

ಟ್ವಿಟರ್ ಪ್ರೊಪೈಲ್ ನಲ್ಲಿ ಉದ್ಯಮಿ, ಸಂಶೋಧನಾ ವಿಶ್ಲೇಷಕಿ, ಸಾಮಾಜಿಕ ಕಾರ್ಯಕರ್ತೆ, ರಾಷ್ಟ್ರೀಯತಾವಾದಿ ಮತ್ತು “ಹೆಮ್ಮೆಯ ಭಾರತೀಯಳು ಎಂದು ಹೇಳಿಕೊಂಡಿರುವ ಕಾಜಲ್ ಹಿಂದೂಸ್ತಾನಿ, ಸಾಮಾಜಿಕ ಜಾಲತಾಣದಲ್ಲಿ 92,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದು, ವಿಶ್ವ ಹಿಂದೂ ಪರಿಷತ್ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಆಗಾಗ್ಗೆ ಪಾಲ್ಗೊಳ್ಳುತ್ತಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read