ವಿಜಯಪುರ: ಬರ್ತ್ ಡೇ ಪಾರ್ಟಿಗೆಂದು ಹಾಸ್ಟೆಲ್ ವಿದ್ಯಾರ್ಥಿಗಳನ್ನು ಹೋಟೆಲ್ ಗೆ ಕರೆದೊಯ್ದು ಮೋಜು-ಮಸ್ತಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಟೆಲ್ ವಾರ್ಡನ್ ಹಾಗೂ ಅಡುಗೆ ಕೆಲಸದವಳಿಗೆ ನೋಟಿಸ್ ನೀಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ವಾರ್ಡನ್ ಹಾಗೂ ಅಡುಗೆ ಕೆಲಸದಾಕೆಗೆ ನೋಟಿಸ್ ನೀಡಿದ್ದಾರೆ. ವಿಜಯಪುರ ನಗರದ ರಾಜಕುಮಾರ್ ಲೇಔಟ್ ನಲ್ಲಿರುವ ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ.
ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಈ ಹಾಸ್ಟೆಲ್ ನ ವಾರ್ಡನ್ ಶಕುಂತಲಾ ರಜಪೂತ್, ಯಾವುದೇ ಅನುಮತಿ ಪಡೆಯದೇ ಅಲ್ಲಿನ ವಿದ್ಯಾರ್ಥಿಗಳನ್ನು ಹುಟ್ಟುಹಬ್ಬದ ಪಾರ್ಟಿಗೆಂದು ಹೋಟೆಲ್ ಗೆ ಕರೆದೊಯ್ದಿದ್ದಾರೆ. ವಸತಿ ನಿಲಯದ ವಿದ್ಯಾರ್ಥಿಗಳ ಜೊತೆ ಮೋಜು-ಮಸ್ತಿ ಮಾಡಿದ್ದಾರೆ. ಈ ಮೂಲಕ ಹಾಸ್ಟೆಲ್ ನಿಯಮ ಉಲ್ಲಂಘಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು, ಹಾಸ್ಟೆಲ್ ವಾರ್ಡನ್ ಶಕುಂತಲಾ ಹಾಗೂ ಅಡುಗೆ ಕೆಲಸದ ರಿಜ್ವಾನ್ ಮುಲ್ಲಾ ಅವರಿಗೆ ನೋಟಿಸ್ ನೀಡಿದ್ದಾರೆ. ಅಡುಗೆ ಕೆಲಸದವಳು ಈ ಹಿಂದೆ ಇಂಡಿ ತಾಲೂಕಿನ ವಸತಿ ನಿಲಯದಲ್ಲಿಯೂ ಈ ರೀತಿ ಬರ್ತ್ ದೆ ಪಾರ್ಟಿ ಮಾಡಿ ಅಮಾನತುಗೊಂಡಿದ್ದರು ಎಂದು ತಿಳಿದುಬಂದಿದೆ.