ಹಾಸನ: ಪ್ರವಾಸಿಗರ ಮೇಲೆ ರೆಸಾರ್ಟ್ ಮಾಲೀಕ ಹಾಗೂ ಕೆಲಸಗಾರರು ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದ ಅಚ್ಚರಿಗೆ ಗ್ರಾಮದಲ್ಲಿ ನಡೆದಿದೆ.
ಬೇಸಿಗೆ ರಜೆ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಕುಟುಂಬವೊಂದು ಪ್ರವಾಸಿಕ್ಕೆ ಬಂದಿತ್ತು. ಅಚ್ಚರಿಗೆ ಬಳಿಯ ರೆಸಾರ್ಟ್ ನಲ್ಲಿ ತಂಗಿದ್ದರು. ರೆಸಾರ್ಟ್ ಮಾಲೀಕ ಮೊದಲೇ ಪೂರ್ತಿ ಹಣ ಪಾವತಿ ಮಾಡಬೇಕು ಹಾಗೂ ಎರಡು ಗಂಟೆ ಮುಂಚಿತವಾಗಿ ರೂಂ ಖಾಲಿ ಮಾಡಬೇಕು ಎಂದು ಹೇಳಿದ್ದಾನೆ. ಇದಕ್ಕೆ ಪ್ರವಾಸಿಗರು ಒಪ್ಪಿಲ್ಲ.
ಇದಕ್ಕೆ ಕ್ಯಾತೆ ತೆಗೆದ ರೆಸಾರ್ಟ್ ಮಾಲೀಕ ಹಾಗೂ ಕೆಲಸಗಾರರು, ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದಾನೆ. ಮಹಿಳೆಯರು, ಮಕ್ಕಳು ಎಂಬುದನ್ನೂ ನೋಡದೇ ಹಲ್ಲೆ ನಡೆಸಲಾಗಿದೆ ಎಂದು ಪ್ರವಾಸಿಗರು ಆರೋಪಿಸಿದ್ದಾರೆ. ರೆಸಾರ್ಟ್ ಮಾಲೀಕ ಹಾಗೂ ಕೆಲಸಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.