ಹಾಸನ: ಜಗಳ ಬಿಡಿಸಲು ಹೋದ ವ್ಯಕ್ತಿಯನ್ನೇ ಚಾಕು ಇರಿದು ಕೊಲೆಗೈದ ಘಟನೆ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ದೋಣನಕಟ್ಟಿ ಗ್ರಾಮದಲ್ಲಿ ನಡೆದಿದೆ.
ಲಕ್ಕಪ್ಪ (೪೮) ಕೊಲೆಯಾದ ವ್ಯಕ್ತಿ. ಬಸವರಾಜ ಚಾಕುವಿನಿಂದ ಇರಿದು ಕೊಲೆಗೈದ ಆರೋಪಿ. ಶಶಿ, ವಸಂತ ಹಾಗೂ ಬಸವರಾಜ್ ನಡುವೆ ಜಗಳ ನಡುವೆ ಗಲಾಟೆ ನಡೆಯುತ್ತಿದ್ದ ವೇಳೆಲಕ್ಕಪ್ಪ ಜಗಳ ಬಿಡಿಸಲು ಹೋಗಿದ್ದಾನೆ. ಈ ವೇಳೆ ಬಸವರಾಜ್ ಚಾಕುವಿನಿಂದ ಇರಿದು ಲಕ್ಕಪ್ಪನನ್ನೇ ಕೊಲೆಗೈದಿದ್ದಾನೆ. ಹಲ್ಲೆಗೆ ನಂಜುಂಡಿ ಎಂಬಾತ ಸಾಥ್ ನೀಡಿದ್ದಾನೆ.
ಕೊಲೆ ಬಳಿಕ ಬಸವರಾಜ್ ಹಾಗೂ ನಂಜುಂಡಿ ತಲೆಮರೆಸಿಕೊಂಡಿದ್ದಾರೆ. ಅರಸಿಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.