ಬೆಂಗಳೂರು : ಬಿಜೆಪಿ ಮುಖಂಡರು, ಕಾರ್ಯಕರ್ತರ ಮನೆಗೂ ‘ಗೃಹಲಕ್ಷ್ಮಿ ಹಣ ತಲುಪಿದೆಯಲ್ವಾ..? ಎಂದು ಕಾಂಗ್ರೆಸ್ ಟಾಂಗ್ ನೀಡಿದೆ.
ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 86% ಮಹಿಳೆಯರು ಈಗಾಗಲೇ ನೋಂದಣಿ ಮಾಡಿಸಿ ₹2000 ಹಣ ಪಡೆಯುತ್ತಿದ್ದಾರೆ. ಇನ್ನುಳಿದವರ ಬ್ಯಾಂಕ್ ಖಾತೆಗಳ ತಾಂತ್ರಿಕ ಸಮಸ್ಯೆಯನ್ನು ನಿವಾರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ನಮ್ಮ ಸರ್ಕಾರದ ನೆರವಿನಿಂದ ಗೃಹಲಕ್ಷ್ಮಿಯರ ಮನೆಯಲ್ಲಿ ವಿಜಯದಶಮಿ ಸಂಭ್ರಮದಿಂದ ಕಳೆಗಟ್ಟಿದೆ. ಹೀನಾಯ ಸೋಲಿನಿಂದ ಕಾಣೆಯಾಗಿರುವುದು ಬಿಜೆಪಿಯವರ ನಿದ್ರೆ, ಸಂತೋಷವೇ ಹೊರತು ನಮ್ಮ ಸಚಿವರಲ್ಲ, ಅಂದಹಾಗೆ ಬಿಜೆಪಿ ಮುಖಂಡರ, ಕಾರ್ಯಕರ್ತರ ಮನೆಗೂ ಗೃಹಲಕ್ಷ್ಮಿ ಹಣ ಯಾವುದೇ ತೊಂದರೆ ಇಲ್ಲದೆ ತಲುಪಿದೆಯಲ್ಲವೇ! ಎಂದು ಕಾಂಗ್ರೆಸ್ ಟಾಂಗ್ ನೀಡಿದೆ.
https://twitter.com/INCKarnataka/status/1716393911877341653