ಇದ್ದಕ್ಕಿದ್ದಂತೆ ಸಾವನ್ನಪ್ಪಿದ ಮತ್ತೊಂದು ಘಟನೆ; ಜಿಮ್ ನಲ್ಲಿ ವರ್ಕೌಟ್ ಮಾಡ್ತಿದ್ದಾಗಲೇ ಬಂದೆರಗಿದ ಸಾವು…!

ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗಲೇ ಹರಿಯಾಣದಲ್ಲಿ ಪೊಲೀಸ್ ಉಪ ಅಧೀಕ್ಷಕರು ನಿಧನರಾಗಿರುವ ಆಘಾತಕಾರಿ ಘಟನೆ ನಡೆದಿದೆ. ಮೃತ ಜೋಗಿಂದರ್ ದೇಸ್ವಾಲ್ ಪಾಣಿಪತ್‌ನ ಜಿಲ್ಲಾ ಕಾರಾಗೃಹದ ಉಪ ಅಧೀಕ್ಷಕರಾಗಿ ನೇಮಕಗೊಂಡಿದ್ದರು.

ವರದಿಯ ಪ್ರಕಾರ ದೇಸ್ವಾಲ್ ಭಾನುವಾರ ರಾತ್ರಿ ಕರ್ನಾಲ್‌ನಲ್ಲಿರುವ ತಮ್ಮ ಮನೆಯಲ್ಲಿದ್ದರು. ಬೆಳಗ್ಗೆ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ 5 ಗಂಟೆ ಸುಮಾರಿಗೆ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದಾಗ್ಯೂ ಅವರು ಬದುಕುಳಿಯಲಿಲ್ಲ. ಅವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಈ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಈ ವರ್ಷದ ಆರಂಭದಲ್ಲಿ ದೇಸ್ವಾಲ್ ಅವರ ಮಗ, ಅಪ್ಪನ ಗುರುತಿನ ಚೀಟಿಯನ್ನು ಬಳಸಿ ಟೋಲ್ ಪ್ಲಾಜಾವನ್ನು ದಾಟುತ್ತಿದ್ದಾಗ ಸಿಕ್ಕಿಬಿದ್ದಾಗ ದೇಸ್ವಾಲ್ ಸುದ್ದಿಯಲ್ಲಿದ್ದರು. ದೇಸ್ವಾಲ್ ಅವರ ಮಗನನ್ನು ಹರಿಯಾಣ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಆಶಿಶ್ ಕುಮಾರ್ ಅವರು ಪಾಣಿಪತ್‌ನ ಟೋಲ್ ಪ್ಲಾಜಾದಲ್ಲಿ ಬಂಧಿಸಿದ್ದರು.

ಇತ್ತೀಚಿಗೆ ಕೋವಿಡ್ ನಂತರ ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ವರ್ಕೌಟ್ ಮಾಡುತ್ತಿದ್ದಾಗಲೇ ಸಾವು ಸಂಭವಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು ಆತಂಕ ಹೆಚ್ಚಿಸಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read