ಹರಿಯಾಣ ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದೆ. ಬಿಜೆಪಿಯು ಆಡಳಿತ ವಿರೋಧಿ ಸವಾಲುಗಳನ್ನು ಎದುರಿಸಿ ಸತತ ಮೂರನೇ ಅವಧಿಗೆ ಅಧಿಕಾರ ಪಡೆಯುವ ಗುರಿ ಹೊಂದಿದೆ. ದಶಕದ ಸುದೀರ್ಘ ವಿರಾಮದ ನಂತರ ಕಾಂಗ್ರೆಸ್ ಅಧಿಕಾರ ಹಿಡಿಯಲು ಸಜ್ಜಾಗಿದೆ.
ಪ್ರಮುಖ ಸ್ಪರ್ಧಿ ಪಕ್ಷಗಳಾದ ಭಾರತೀಯ ಜನತಾ ಪಕ್ಷ(ಬಿಜೆಪಿ), ಕಾಂಗ್ರೆಸ್, ಆಮ್ ಆದ್ಮಿ ಪಕ್ಷ(ಎಎಪಿ), ಭಾರತೀಯ ರಾಷ್ಟ್ರೀಯ ಲೋಕದಳ(ಐಎನ್‌ಎಲ್‌ಡಿ)-ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಜನನಾಯಕ ಜನತಾ ಪಾರ್ಟಿ(ಜೆಜೆಪಿ)-ಆಜಾದ್ ಸಮಾಜ ಪಕ್ಷಗಳು ಗೆಲುವಿಗೆ ಕಾರ್ಯತಂತ್ರ ರೂಪಿಸಿವೆ.
ಮುಖ್ಯ ಚುನಾವಣಾಧಿಕಾರಿ ಪಂಕಜ್ ಅಗರ್ವಾಲ್ ಪ್ರಕಾರ, ಹರಿಯಾಣದ ಎಲ್ಲಾ 90 ಕ್ಷೇತ್ರಗಳಿಗೆ ಶುಕ್ರವಾರ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದ್ದು, 8,821 ಶತಾಧಿಪತಿಗಳು ಸೇರಿದಂತೆ ಎರಡು ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ.
ಒಟ್ಟು 2,03,54,350(2.03 ಕೋಟಿ) ಮತದಾರರು ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಹರಿಯಾಣದಲ್ಲಿ 100 ವರ್ಷ ಮೇಲ್ಪಟ್ಟ 8,821 ಮತದಾರರಿದ್ದಾರೆ. ಒಟ್ಟು ಅರ್ಹ ಮತದಾರರಲ್ಲಿ 1,07,75,957(1.07 ಕೋಟಿ) ಪುರುಷರು, 95,77,926(95.77 ಲಕ್ಷ) ಮಹಿಳೆಯರು ಮತ್ತು 467 ಟ್ರಾನ್ಸ್ ಜೆಂಡರ್ ಮತದಾರರಿದ್ದಾರೆ. 20,629 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ನಯಾಬ್ ಸಿಂಗ್ ಸೈನಿ, ಭೂಪಿಂದರ್ ಸಿಂಗ್ ಹೂಡಾ, ಅಭಯ ಸಿಂಗ್ ಚೌತಾಲ, ದುಶ್ಯಂತ್ ಚಾತಾಲ, ಸಾವಿತ್ರಿ ಜಿಂದಾಲ್, ವಿನೇಶ್ ಪೋಗಟ್ ಸೇರಿದಂತೆ ಹಲವು ಪ್ರಮುಖರು ಕಣದಲ್ಲಿದ್ದಾರೆ.
Voting for the Haryana Assembly elections begins; all 90 seats are going to polls today#HaryanaElelction pic.twitter.com/1oojqD3zEt
— ANI (@ANI) October 5, 2024