BIG NEWS: ಹರಿಯಾಣದಲ್ಲಿ ಬಿಜೆಪಿ ಗೆಲುವು ಸ್ಪಷ್ಟ: ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್ ಫಾರ್ಮುಲಾ ಸಕ್ಸಸ್ ಆಗಿದೆ ಎಂದ ಸಿ.ಟಿ. ರವಿ

ಬೆಂಗಳೂರು: ಹರಿಯಾಣದಲ್ಲಿ ಬಿಜೆಪಿಗೆ ಆರಂಭಿಕ ಹಿನ್ನಡೆಯಾದರೂ ಬಳಿಕ ಮುನ್ನಡೆಯಾಗಿದೆ. ಹಾಗಾಗಿ ಹರಿಯಾಣದಲ್ಲಿ ಬಿಜೆಪಿ ಗೆಲುವು ನಮಗೆ ಸ್ಪಷ್ಟವಾಗಿದೆ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ 28-32 ಸ್ಥಾನ ಬಿಜೆಪಿಗೆ ಬರಲಿದೆ ಎಂದು ನಮ್ಮ ಸಮೀಕ್ಷೆ ಹೇಳಿತ್ತು. ಆದರೆ ಅಲ್ಲಿ ಕಾಂಗ್ರೆಸ್ ಫಾರ್ಮುಲಾ ಸಕ್ಸಸ್ ಆಗಿದೆ. ಇನ್ನೂ ಫಲಿತಾಂಶ ಬಾಕಿ ಇದೆ ನೋಡೋಣ ಎಂದು ಹೇಳಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಹಗರಣಗಳಲ್ಲಿಯೇ ಮುಳುಗೆದ್ದಿದೆ. ಆದರೆ ಹರಿಯಾಣದಲ್ಲಿ ಬಿಜೆಪಿ ಹಗರಣಗಳಲ್ಲಿ ಮುಳುಗೇಳುವ ಕೆಲಸ ಮಾಡಿಲ್ಲ. ಇನ್ನೂ 12 ಗಂಟೆ ಬಳಿಕ ಸ್ಪಷ್ಟತೆ ಸಿಗಲಿದೆ. ಫಲಿತಾಂಶ ಏನೇ ಬಂದರೂ ಚುನಾವಣಾ ಆಯೋಗ ದೂರುವ ಕೆಲಸವನ್ನು ನಾವು ಮಾಡಲ್ಲ. ಜಮ್ಮು-ಕಾಶ್ಮೀರದಲ್ಲಿ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಮತ ಚಲಾವಣೆಯಾಗಿದೆ. ಹಾಗಾಗಿ ಜನ ನಾವು ಭಾರತದ ಜೊತೆ, ಪ್ರಜಾಪ್ರಭುತ್ವದ ಜೊತೆ ಇದ್ದೇವೆ ಎಂದು ತೋರಿಸಿದ್ದಾರೆ. ಹಾಗಾಗಿಯೇ ಇದು ಪ್ರಜಾಪ್ರಭುತ್ವದ ಜಯ. ಜನ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟು ಭಯೋತ್ಪಾದಕರ ವಿರುದ್ಧ ಮತ ಚಲಾಯಿಸಿದ್ದಾರೆ ಎಂದು ಹೇಳಿದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read