ಹರ್ಭಜನ್ ಸಿಂಗ್ ಇಸ್ಲಾಂಗೆ ಮತಾಂತರಗೊಳ್ಳಲು ಬಯಸಿದ್ದರು: ಪಾಕ್ ಮಾಜಿ ನಾಯಕ ಇಂಜಮಾಮ್ ಸ್ಪೋಟಕ ಹೇಳಿಕೆ

ವಿಶ್ವಕಪ್ ಇದೀಗ  ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ,  ವಿಶ್ವದ 4 ಅಗ್ರ ಕ್ರಿಕೆಟ್ ತಂಡಗಳು ಮೈದಾನದೊಳಗೆ ಟ್ರೋಫಿಗಾಗಿ ಹೋರಾಡುತ್ತಿದ್ದರೆ, ಹರ್ಭಜನ್ ಸಿಂಗ್ ಮತ್ತು ಇಂಜಮಾಮ್-ಉಲ್-ಹಕ್ ಅದರ ಹೊರಗೆ ಮುಖಾಮುಖಿಯಾಗಿದ್ದಾರೆ.

 ಹರ್ಭಜನ್ ಸಿಂಗ್ ಇಸ್ಲಾಂಗೆ ಮತಾಂತರಗೊಳ್ಳುವ ಬಗ್ಗೆ ಯೋಚಿಸುತ್ತಿದ್ದರು ಎಂದು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಹೇಳಿದ್ದಾರೆ. ಈಗ ಭಾರತದ ಮಾಜಿ ಆಫ್ ಸ್ಪಿನ್ನರ್ ಸೂಕ್ತ ಉತ್ತರ ನೀಡಿದ್ದಾರೆ.

ಹರ್ಭಜನ್ ಇಸ್ಲಾಂಗೆ ಮತಾಂತರಗೊಳ್ಳುವ ಬಗ್ಗೆ ಯೋಚಿಸುತ್ತಿದ್ದರು. ಮೌಲಾನಾ  ತಾರಿಕ್ ಜಮೀಲ್ ಅವರನ್ನು ಭೇಟಿಯಾದಾಗ ಅವರು ಹಾಗೆ ಭಾವಿಸಿದರು. ಮೌಲಾನಾ ತಾರಿಕ್ ಜಮೀಲ್ ಪಾಕಿಸ್ತಾನ ಕ್ರಿಕೆಟ್ ತಂಡದೊಂದಿಗೆ ನಮಾಜ್ ಮಾಡಲು ಬರುತ್ತಿದ್ದರು ಎಂದು ಇಂಜಮಾಮ್ ಹೇಳಿದ್ದರು.

ಪಾಕಿಸ್ತಾನ ಕ್ರಿಕೆಟ್ ತಂಡದೊಂದಿಗೆ ನಮಾಜ್ ಓದಲು ಹೆಸರುವಾಸಿಯಾದ ಮೌಲಾನಾ ತಾರಿಕ್ ಜಮೀಲ್ ಅವರ ಬೋಧನೆಗೆ ಹಾಜರಾಗುತ್ತಿದ್ದ ಭಾರತೀಯ ಕ್ರಿಕೆಟಿಗರಲ್ಲಿ ಹರ್ಭಜನ್ ಕೂಡ ಒಬ್ಬರು ಎಂದು ಇಂಜಮಾಮ್ ವೀಡಿಯೊದಲ್ಲಿ ಹೇಳಿದ್ದಾರೆ. ಪ್ರವಾಸದ ಸಮಯದಲ್ಲಿ, ಇರ್ಫಾನ್ ಪಠಾಣ್, ಜಹೀರ್ ಮತ್ತು ಮೊಹಮ್ಮದ್ ಕೈಫ್ ಅವರನ್ನು ಪ್ರಾರ್ಥನೆಯ ಅವಧಿಗಳಿಗೆ ಸೇರಲು ಆಹ್ವಾನಿಸಿದ್ದೇನೆ ಎಂದು ಇಂಜಮಾಮ್  ಹೇಳಿದ್ದಾರೆ. ಭಾರತದ ಮಾಜಿ ಸ್ಪಿನ್ನರ್ ಬೋಧನೆಯಿಂದ ಪ್ರಭಾವಿತರಾಗಿದ್ದಾರೆ ಮತ್ತು ಮತಾಂತರಗೊಳ್ಳುವ ಬಯಕೆಯನ್ನು ಸಹ ವ್ಯಕ್ತಪಡಿಸಿದ್ದಾರೆ ಎಂದು ಇಂಜಮಾಮ್ ಹೇಳಿದ್ದಾರೆ.

ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಹರ್ಭಜನ್ ಸಿಂಗ್ ಟ್ವಿಟ್ಟರ್ ನಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಹರ್ಭಜನ್ ಸಿಂಗ್, “ಯೇ ಕೋನ್ ಸಾ ನಶಾ ಪೀ ಕರ್ ಬಾತ್ ಕರ್ ರಹಾ ಹೈ? ನಾನು  ಹೆಮ್ಮೆಯ ಭಾರತೀಯ ಮತ್ತು ಹೆಮ್ಮೆಯ ಸಿಖ್.. ಯೇ ಬಕ್ವಾಸ್ ಲೋಗ್ ಕುಚ್ ಬಿ ಬಕ್ತೆ ಹೈ (ಅಂತಹ ಅಸಂಬದ್ಧವಾಗಿ ಮಾತನಾಡುವ ಮೊದಲು ಅವರು ಏನು ಕುಡಿಯುತ್ತಿದ್ದರು? ನಾನು ಹೆಮ್ಮೆಯ ಭಾರತೀಯ ಮತ್ತು ಹೆಮ್ಮೆಯ ಸಿಖ್) ಎಂದು ತಿರುಗೇಟು ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read