BREAKING : ಕೆರಗೋಡು ಗ್ರಾಮದಲ್ಲಿ ‘ಹನುಮ ಧ್ವಜ’ ವಿವಾದ : ಫೆ.9 ರಂದು ‘ಮಂಡ್ಯ’ ನಗರ ಬಂದ್ ಗೆ ಕರೆ

ಮಂಡ್ಯ : ಕೆರಗೋಡು ಗ್ರಾಮದಲ್ಲಿ ಹನುಮಾನ್ ಧ್ವಜ ವಿವಾದ ತಾರಕಕ್ಕೇರಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

ಹನುಮ ಧ್ವಜ ವಿವಾದ ಹಿನ್ನೆಲೆ ಫೆ.9 ರಂದು ಮಂಡ್ಯ ನಗರ ಬಂದ್ ಗೆ ಕರೆ ನೀಡಲಾಗಿದೆ. ಭಜರಂಗದಳ ಸಂಘಟನೆ ಫೆ.9 ರಂದು ಮಂಡ್ಯ ನಗರ ಬಂದ್ ಗೆ ಕರೆ ನೀಡಿದೆ ಎಂದು ತಿಳಿದು ಬಂದಿದೆ.

ಏನಿದು ವಿವಾದ

ಮಂಡ್ಯದ ಕೆರಗೋಡು ಗ್ರಾಮದಲ್ಲಿ 108 ಅಡಿ ಎತ್ತರದಲ್ಲಿ ಕಟ್ಟಲಾಗಿದ್ದ ಹನುಮ ಧ್ವಜವನ್ನು ಜಿಲ್ಲಾಡಳಿತ ತೆರವುಗೊಳಿಸಿದ ಬೆನ್ನಲ್ಲೇ ನಿಷೇಧಾಜ್ಞೆ ಉಲ್ಲಂಘಿಸಿ ಗ್ರಾಮಸ್ಥರು, ಹಿಂದೂಪರ ಸಂಘಟನೆ ಕಾರ್ಯಕರ್ತರ ಸಮ್ಮುಖದಲ್ಲಿ ಮಹಿಳೆಯರು ಏಣಿ ಮೂಲಕ ಧ್ವಜಸ್ತಂಭ ಹತ್ತಿ ಶ್ರೀರಾಮನ ಫ್ಲೆಕ್ಸ್ ಹಾಗೂ ಕೇಸರಿ ಧ್ವಜವನ್ನು ಕಟ್ಟಿದ್ದರು. ಅಲ್ಲದೇ ಕೇಸರಿ ಬಾವುಟಗಳನ್ನು ಹಿಡಿದು ಗ್ರಾಮಸ್ಥರು ಧ್ವಜಸ್ತಂಭದ ಬಳಿ ನೆರೆದಿದ್ದರು.

ಧ್ವಜಸ್ತಂಭದಲ್ಲಿ ಕಟ್ಟಿದ್ದ ಫ್ಲೆಕ್ಸ್ ಹಾಗೂ ದ್ವಜವನ್ನು ತೆರವುಗೊಳಿಸಲು ಮುಂದಾದ ಪೊಲಿಸರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ.. ಈ ವೇಳೆ ಪೊಲೀಸರು ಹಾಗೂ ಯುವಕರ ನಡುವೆ ವಾಗ್ವಾದ ನಡೆದಿದ್ದು, ಯುವಕರನ್ನು ಚದುರಿಸಲು ಪೊಲೀಸರು ಮತ್ತೆ ಲಘು ಲಾಠಿ ಪ್ರಹಾರ ನಡೆಸಿದ್ದಾರೆ., ಸ್ಥಳದಲ್ಲಿ ಉದ್ಬಿಗ್ನ ವಾತಾವರಣ ನಿರ್ಮಾಣವಾಗಿದೆ.ನಂತರ ವಿವಾದಿತ ಧ್ವಜ ಸ್ಥಂಭದ ಮೇಲೆ ಜಿಲ್ಲಾಡಳಿತ ತ್ರಿವಣ ಧ್ವಜ ಹಾರಿಸಿದೆ. ಎಸಿ ನೇತೃತ್ವದಲ್ಲಿ ಪೊಲೀಸರು ಭಾರತದ ತ್ರಿವಣ ಧ್ವಜವನ್ನು ಹಾರಿಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಬ್ಯಾರಿಕೇಡ್ ಎತ್ತಿ ಪೊಲೀಸರ ಮೇಲೆ ಎಸೆದಿದ್ದಾರೆ. ಮತ್ತೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read