ಇತ್ತೀಚಿಗಷ್ಟೇ ತನ್ನ ಟ್ರೈಲರ್ ನಿಂದ ನಿಂದ ಸಾಕಷ್ಟು ಕುತೂಹಲ ಮೂಡಿಸಿದ್ದ, ಅನೀಶ್ ಅಭಿನಯದ ‘ಆರಾಮ ಅರವಿಂದಸ್ವಾಮಿ’ ಚಿತ್ರ ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲು ಸಜ್ಜಾಗಿದೆ. ಮೊದಲ ಮೂರು ದಿನ ಕೇವಲ 99 ರೂ. ಗಳಿಗೆ ಟಿಕೆಟ್ ದೊರೆಯುವುದಾಗಿ ಚಿತ್ರತಂಡ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.
ಅಭಿಷೇಕ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಅನೀಶ್ ಗೆ ಜೋಡಿಯಾಗಿ ಮಿಲನ ನಾಗರಾಜ್ ಅಭಿನಯಿಸಿದ್ದು, ಆಲಿಕ್ಯಾ ಸ್ಟುಡಿಯೋಸ್ ಹಾಗೂ 786 ಫಿಲಂಸ್ ಬ್ಯಾನರ್ ನಲ್ಲಿ ಶ್ರೀಕಾಂತ್ ಪ್ರಸನ್ನ ಮತ್ತು ಪ್ರಶಾಂತ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಉಮೇಶ್ ಆರ್ ಬಿ ಸಂಕಲನ, ಶಿವಸಾಗರ್ ಛಾಯಾಗ್ರಹಣವಿದೆ. ಇದೊಂದು ಆಕ್ಷನ್ ರೋಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ ಸಿನಿಮಾ ಎಂದು ಹೇಳಲಾಗಿದೆ.