HAL ನಿಂದ ಲಘು ತೇಜಸ್ ಯುದ್ಧ ವಿಮಾನ ಹಾರಾಟ ಪ್ರಯೋಗ ಯಶಸ್ವಿ

ಬೆಂಗಳೂರು: ಹೆಚ್ಎಎಲ್ ನಿರ್ಮಿತ ತೇಜಸ್ ಎಂಕೆ1 ಗೆ ವಿಮಾನ ಸರಣಿಯ ಮೊದಲ ಲಘು ಯುದ್ಧ ವಿಮಾನ ಎಲ್ಎ 5033(Light Combat Aircraft Tejas Mk1A)  ಯಶಸ್ವಿಯಾಗಿ ಹಾರಾಟ ನಡೆಸಿದೆ.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಹೆಚ್ಎಎಲ್)ನಲ್ಲಿ ಲಘು ಸಮರ ವಿಮಾನಗಳ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ನಿವೃತ್ತ ಪೈಲಟ್ ಕೆ.ಕೆ. ವೇಣುಗೋಪಾಲ್ 18 ನಿಮಿಷಗಳ ಕಾಲ ಯಶಸ್ವಿಯಾಗಿ ವಿಮಾನ ಹಾರಾಟ ನಡೆಸಿದ್ದಾರೆ.

ಈ ವಿಮಾನವನ್ನು ರಾಷ್ಟ್ರೀಯ ಏರೋ ಸ್ಪೇಸ್ ಪ್ರಯೋಗಾಲಯದ ಸಹಯೋಗದಲ್ಲಿ ತಯಾರಿಸಲಾಗಿದೆ. ಅತ್ಯಾಧುನಿಕ ರೇಡಾರ್, ಉನ್ನತಿಕರಿಸಿದ ಸಂಪರ್ಕ ವ್ಯವಸ್ಥೆ, ಯುದ್ಧ ಸಾಮರ್ಥ್ಯಗಳನ್ನು ಹೊಂದಿದ ವಿಮಾನಗಳನ್ನು ಶೀಘ್ರವೇ ಭಾರತೀಯ ವಾಯು ಸೇನೆಗೆ ಹಸ್ತಾಂತರಿಸಲಾಗುತ್ತದೆ ಎಂದು ಹೆಚ್ಎಎಲ್ ನ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಸಿ.ಬಿ. ಅನಂತ ಕೃಷ್ಣನ್ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read