ಸಾಮಾನ್ಯವಾಗಿ ತನ್ನ ಮರುಭೂಮಿ ಹಾಗೂ ಮರಳು ದಿಬ್ಬಗಳಿಂದ ರಾಜಸ್ಥಾನ ಪರಿಚಿತವಾಗಿದೆ. ಅದರಲ್ಲೂ ಬೇಸಿಗೆ ಕಾಲದಲ್ಲಿ ರಾಜಸ್ಥಾನ ಅಕ್ಷರಶಃ ಬೆಂಕಿಯಂತಾಗಿರುತ್ತದೆ.
ಆದರೆ ಮಾರ್ಚ್ 24ರಂದು ರಾಜ್ಯದಲ್ಲಿ ಸುರಿದ ಭಾರೀ ಆಲಿಕಲ್ಲು ಮಳೆಯ ಕಾರಣ ರಾಜಸ್ಥಾನದ ಭೂದೃಶ್ಯಗಳು ಕಾಶ್ಮೀರವನ್ನು ನೆನಪಿಸುವಂತೆ ಆಗಿವೆ.
ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪ್ರವೀಣ್ ಕಸ್ವನ್ ಆಲಿಕಲ್ಲು ಮಳೆ ತಂದಿರುವ ಅವಾಂತರದ ವಿಡಿಯೋ ಶೇರ್ ಮಾಡಿದ್ದು, ಅಕಾಲಿಕ ಮಳೆಯಿಂದ ರೈತರ ಪಾಡು ಹೇಗಾಗಿದೆ ಎಂದು ಪರಿಚಯಿಸಿದ್ದಾರೆ. ಶ್ರೀಗಂಗಾನಗರದ ಬೀದಿಗಳು ಆಲಿಕಲ್ಲುಗಳಿಂದ ತುಂಬಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
“ಮಿಕ್ಕಿದ್ದೆಲ್ಲಾ ಸರಿಯಾಗೇ ಆದರೂ, ಇಂಥ ಒರಟು ಹವಾಮಾನವು ರೈತರ ಬೆವರಿನ ಫಲವನ್ನೆಲ್ಲಾ ಹಾಳು ಮಾಡಬಲ್ಲದು. ಈ ರೈತರ ಕಠಿಣ ಪರಿಶ್ರಮದ ಫಲವೆಲ್ಲಾ ಮುಕ್ತ ಬಯಲುಗಳಲ್ಲಿ ಹೀಗೆ ಸಿಗುತ್ತವೆ. ರಾಜಸ್ಥಾನದ ಶ್ರೀಗಂಗಾ ನಗರದಲ್ಲಿ ಇಂದು ಕಂಡು ಬಂದ ದೃಶ್ಯ,” ಎಂದು ಪೋಸ್ಟ್ ಮಾಡಿದ್ದಾರೆ ಕಸ್ವನ್.
https://twitter.com/ParveenKaswan/status/1639214367492407296?ref_src=twsrc%5Etfw%7Ctwcamp%5Etweetembed%7Ctwterm%5E1639214367492407296%7Ctwgr%5Eab36034d46935e717f521867ccc085ef10f21eac%7Ctwcon%5Es1_&ref_url=https%3A%2F%2Fwww.news18.com%2Fbuzz%2Fhailstorm-in-rajasthan-seriously-this-viral-video-is-saying-so-7385263.html