BIG NEWS: ನೈತಿಕತೆ ಇದ್ದರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: HDK ಆಗ್ರಹ

ಬೆಂಗಳೂರು: ಚಿನಸ್ವಾಮಿ ಸ್ಟೆಡಿಯಂ ನಲ್ಲಿ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವನ್ನಪ್ಪಿದ ಪ್ರಕರಣದಲ್ಲಿ ನೈತಿಕತೆ ಇದ್ದರೆ ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ನೀಡಲಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ದುರಂತದ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ರಾಜೀನಾಮೆ ಕೊಡಬೇಕು. ನೈತಿಕರೆ ಇದ್ದರೆ ರಾಜೀನಾಮೆ ಕೊಡುತ್ತಾರೆ. ಇಲ್ಲವಾದರೆ ಏನು ಮಾಡಲು ಸಾಧ್ಯ? ಇಂದಿನ ರಾಜಕಾರಣಿಗಳು ಬಂಡರು ಎಂಬುದನ್ನು ತೋರಿಸುತ್ತಿದ್ದಾರೆ. ಯಾರೂ ರಾಜೀನಾಮೆ ಕೊಡುವುದಿಲ್ಲ ಆದರೆ ವಿಪಕ್ಷದವರಾಗಿ ನಾವು ರಾಜೀನಾಮೆಗೆ ಒತ್ತಾಯಿಸುತ್ತೇವೆ ಎಂದರು.

ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜುಅವರನ್ನು ತೆಗೆದು ಹಾಕಿದರು. ನಾನು ಹೇಳಿದ ಮೇಲೆ ಜ್ಞಾನೋದಯವಾಗಿದ್ದಕ್ಕೆ ಅಭಿನಂದನೆಗಳು. ಪ್ರಕರಣದಲ್ಲಿ ಐದು ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವ ಅಗತ್ಯವಿರಲಿಲ್ಲ. ವಿಧಾನಸೌಧದಲ್ಲಿ ಕಾರ್ಯಕ್ರಮ ಮಾಡಲೇಬೇಕು ಎಂದು ಕಮಿಷ್ನರ್ ಮೇಲೆ ಒತ್ತಡ ಹಾಕಿದ್ದು ಸರ್ಕಾರದವರೇ. ಅವರೇ ಒತ್ತಡ ಹಾಕಿ ಘಟನೆ ನಡೆದಾದ ಪೊಲೀಸ್ ಅಧಿಅಕರಿಗಳ ಮೇಲೆ ಹಾಕಿವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read