ಹೆಚ್.ಡಿ.ಕೆ ಕಡ್ಡಿ ಗೀರುವ ಕೆಲಸ ಮಾಡುವುದು ಬೇಡ: ಪ್ರಚೋದನಕಾರಿ ಹೇಳಿಕೆ ಕೊಡುವುದನ್ನು ನಿಲ್ಲಿಸಲಿ; ಶಾಸಕ ಹೆಚ್.ಸಿ.ಬಾಲಕೃಷ್ಣ ವಾಗ್ದಾಳಿ

ಬೆಂಗಳೂರು: ನಾಗಮಂಗಲದಲ್ಲಿ ನಡೆದಿರುವ ಗಲಭೆ ಪ್ರಕರಣ ಖಂಡನೀಯ. ಕಿಡಿಗೇಡಿಗಳು ಎಲ್ಲಾ ಧರ್ಮದಲ್ಲಿಯೂ ಇದ್ದಾರೆ. ಅಂಥಹವರೇ ಗಲಭೆ ಮಾಡುವ ಕೆಲಸ ಮಾಡಿದ್ದಾರೆ ಎಂದು ಶಾಸಕ ಹೆಚ್.ಸಿ.ಬಾಲಕೃಷ್ಣ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಕೃಷ್ಣ, ಒಂದು ಧರ್ಮದ ಆಚರಣೆ ನಡೆಯುವಾಗ ಇನ್ನೊಂದು ಧರ್ಮದವರು ಅಡ್ಡಿಪಡಿಸುವುದು ಸರಿಯಲ್ಲ. ಕಿಡಿಗೇಡಿಗಳಿಂದಲೇ ಧರ್ಮ ಧರ್ಮಗಳ ನಡುವೆ ಜಗಳ, ಗಲಾಟೆ ನಡೆಯುತ್ತದೆ. ದ್ವೇಷದ ಭಾವನೆ ಬಿತ್ತದಂತೆ ನಾವೆಲ್ಲರೂ ಇರಬೇಕು. ನಾಗಮಂಗಲ ಗಲಭೆ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗಲಿದೆ ಎಂದರು.

ಹೆಚ್.ಡಿ.ಕುಮಾರಸ್ವಾಮಿಯವರು ಅನಗತ್ಯವಾಗಿ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ಅವರು ಈಗ ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ. ಈಗ ಅವರು ಬೆಂಕಿ ಹೊತ್ತಿಕೊಂಡಿರುವ ಶೆಡ್ ನಲ್ಲಿ ಕಡ್ಡಿಗೀರುವ ಕೆಲಸ ಮಾಡುವುದು ಬೇಡ. ಹಿಂದೆ ಇದೇ ಕುಮಾರಸ್ವಾಮಿಯವರು ಮುಸ್ಲಿಂರ ಓಲೈಕೆ ಮಾಡಿದ್ದರು. ಮಾಜಿ ಸಿಎಂ, ಕೇಂದ್ರ ಸಚಿವರಾಗಿ ಗೌರವಯುತವಾಗಿ ಹೇಳಿಕೆ ಕೊಡಬೇಕು. ಇಂತಹ ಸಂದರ್ಭಗಳಲ್ಲಿ ಪ್ರಚೋದನಕಾರಿ ಹೇಳಿಕೆ ಕೊಡುವುದನ್ನು ಅವರು ಮೊದಲು ನಿಲ್ಲಿಸಲಿ ಎಂದು ವಾಗ್ದಾಳಿ ನಡೆಸಿದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read