BIG NEWS: ಹೆಚ್ ಡಿಕೆ ತಾವು ಸ್ಪರ್ಧಿಸದೇ ಸಂಬಂಧಿಕರನ್ನು ಯಾಕೆ ಕರೆತಂದಿದ್ದಾರೆ? ಜನಪ್ರಿಯ ಸಿಎಂ ಆಗಿದ್ದವರಿಗೆ ಲೋಕಸಭಾ ಚುನಾವಣೆ ಗೆಲ್ಲಲು ಸಾದ್ಯವಾಗುತ್ತಿರಲಿಲ್ಲವೇ?; ಹೆಚ್.ಸಿ.ಬಾಲಕೃಷ್ಣ ಪ್ರಶ್ನೆ

ರಾಮನಗರ: ರಾಮನಗರದ ಜನರನ್ನು ಹಾಸನದ ನಾಯಕರು ಗುಲಾಮರಂತೆ ಕಾಣುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಸಿ.ಬಾಲಕೃಷ್ಣ, ರಾಮನಗರಕ್ಕೆ ಬಂದು ಇಲ್ಲಿಯ ಜನರ ಮೇಲೆ ಅಧಿಕಾರ ನಡೆಸುತ್ತಾ ಅವರನ್ನು ಗುಲಾಮರನ್ನಾಗಿ ಮಾಡಿಕೊಂಡಿದ್ದಾರೆ. ನಮ್ಮನ್ನು ಅವರು ಗುಲಾಮರಂತೆ ಟ್ರೀಟ್ ಮಾಡುತ್ತಿದ್ದಾರೆ. ಅವರು ಬಳಸುವ ಭಾಷೆ ಸುಸಂಸ್ಕೃತವಲ್ಲ. ಈ ಬಾರಿ ರಾಮನಗರದ ಜನ ಸ್ವಾಭಿಮಾನದ ಮತ ಚಲಾಯಿಸುತ್ತಾರೋ ಅಥವಾ ಗುಲಾಮಗಿರಿಯನ್ನು ಒಪ್ಪಿಕೊಳ್ಳುತ್ತಾರೋ ಎಂದು ಕಾದುನೋಡಬೇಕು ಎಂದರು.

ರಾಮನಗರದ ರಾಜಕೀಯದ ಬಗ್ಗೆ ಮಾತನಾಡುವ ಕುಮಾರಸ್ವಾಮಿ ತಾವು ಸ್ಪರ್ಧೆ ಮಾಡದೇ ಸಂಬಂಧಿಕರನ್ನು ಯಾಕೆ ಕರೆತಂದರು? ಜನಪ್ರಿಯ ಮುಖ್ಯಮಂತ್ರಿಯಾಗಿದ್ದವರಿಗೆ ಲೋಕಸಭಾ ಚುನಾವಣೆ ಗೆಲ್ಲುವುದು ಸಾಧ್ಯವಾಗುತ್ತಿರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read