BIG NEWS: ಬಿಜೆಪಿ ಸಂಸದರೆಲ್ಲಾ ಬರಿ ಶೋ ಪೀಸ್ ಗಳು; ಶಾಸಕ ಹೆಚ್.ಸಿ.ಬಾಲಕೃಷ್ಣ ವಾಗ್ದಾಳಿ

ರಾಮನಗರ: ಅನುದಾನ ಬಿಡುಗಡೆ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಬಿಜೆಪಿ ಸಂಸದರು ಈ ಬಗ್ಗೆ ಯಾರೊಬ್ಬರೂ ಕೇಂದ್ರದ ಬಳಿ ಚಕಾರವೆತ್ತುತ್ತಿಲ್ಲ ಎಂದು ಶಾಸಕ ಹೆಚ್.ಸಿ.ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.

ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಾಲಕೃಷ್ಣ, ಕೇಂದ್ರ ಸರ್ಕಾರ ನಮಗೆ ಕೊಡಬೇಕಿರುವ ಅನುದಾನವನ್ನು ಕೊಡುತ್ತಿಲ್ಲ. ಈಗಿರುವ ಬಿಜೆಪಿ ಸಂಸದರು ಯಾರೂ ಗಂಡಸರಲ್ಲ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಸಂಸದರೆಲ್ಲಾ ಬರಿ ಶೋ ಪೀಸ್ ಗಳು. ಟಿಎ, ಡಿಎ ತೆಗೆದುಕೊಂಡು ಬರುವುದಷ್ಟೇ ಇವರ ಕೆಲಸ. ಬಿಜೆಪಿ ಸಂಸದರು ಪ್ರಧಾನಿ ಮೋದಿ ಮುಂದೆ ಕೂರುವುದೂ ಇಲ್ಲ. ರಾಜ್ಯಕ್ಕೆ ಆಗಿರುವ ಅನ್ಯಾಯ ಖಂಡಿಸಿ ನಮ್ಮ ಹೋರಾಟವನ್ನು ನೋಡಿಯಾದರೂ ಬಿಜೆಪಿ ಗಂಡಸರು ಹೋರಾಟ ಮಾಡುತ್ತಾರಾ ನೋಡಬೇಕಿದೆ ಎಂದು ವ್ಯಂಗ್ಯವಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read