Shocking Video: ಹಾಡಹಗಲೇ ತಾಯಿ – ಮಗಳನ್ನು ಕಟ್ಟಿಹಾಕಿ ಹಿಂಸೆ

ಗ್ವಾಲಿಯರ್‌ (ಮಧ್ಯಪ್ರದೇಶ): ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ ಓರ್ವ ಮಹಿಳೆ ಮತ್ತು ಆಕೆಯ ಮಗಳನ್ನು ಕಂಬಕ್ಕೆ ಕಟ್ಟಿ ಹಾಕಿ ಹಲವರು ಹಿಂಸಿಸಿದ ಘಟನೆ ನಡೆದಿದೆ. ಮೂಲಗಳ ಪ್ರಕಾರ, ಈ ಮಹಿಳೆ ಮತ್ತು ಅವರ ಮಗಳನ್ನು ದಬ್ರಾದಲ್ಲಿರುವ ಒಂದು ಆಭರಣ ಅಂಗಡಿಯ ಮಾಲೀಕನ ಸಹಾಯಕರು ಹೊಡೆದಿದ್ದಾರೆ.

ಈ ಮಹಿಳೆ ಆಭರಣ ಅಂಗಡಿಯ ಮಾಲೀಕನ ಪತ್ನಿ ದೇವಸ್ಥಾನಕ್ಕೆ ಹೋಗುವಾಗ ಕಲ್ಲು ಹೊಡೆದಿದ್ದಳು ಎಂದು ಆರೋಪಿಸಲಾಗಿದೆ. ಇಬ್ಬರು ಬಲಿಪಶುಗಳನ್ನು ಹೊಡೆಯುವ ದೃಶ್ಯವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪೊಲೀಸರು ಈ ವಿಡಿಯೋವನ್ನು ಗಮನಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಾಹಿತಿಯ ಪ್ರಕಾರ, ಆಭರಣ ವ್ಯಾಪಾರಿ ವಿಜಯ್ ಅಗರ್ವಾಲ್ ಪತ್ನಿ ಕುಕಿ ಅಗರ್ವಾಲ್ ಸಮೀಪದ ದೇವಸ್ಥಾನಕ್ಕೆ ಪೂಜೆಗೆ ಹೋದಾಗ ಘಟನೆ ನಡೆದಿದೆ. ಅವರು ದೇವಸ್ಥಾನಕ್ಕೆ ಹತ್ತಿರವಾಗುತ್ತಿದ್ದಂತೆ ದೇವಸ್ಥಾನದ ಎದುರು ಮನೆಯಲ್ಲಿ ವಾಸಿಸುವ ಲೀಲಾ ಶರ್ಮಾ ತನ್ನ ಮಗಳು ಗೌರಿ ಮತ್ತು ನೇಹಾ ಜೊತೆ ಕಲ್ಲು ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಕುಕಿಗೆ ಗಾಯಗಳಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರತೀಕಾರವಾಗಿ, ವಿಜಯ್ ಅಗರ್ವಾಲ್ ರ ಕೆಲವು ಉದ್ಯೋಗಿಗಳು ಸ್ಥಳಕ್ಕೆ ಬಂದು ಲೀಲಾ ಶರ್ಮಾ ಮತ್ತು ಅವರ ಮಗಳನ್ನು ಕಂಬಕ್ಕೆ ಕಟ್ಟಿ ಹಾಕಿ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಪೊಲೀಸರು ತ್ವರಿತವಾಗಿ ಕ್ರಮ ಕೈಗೊಂಡರು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಹಿಳೆ ಮತ್ತು ಅವರ ಮಗಳನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆದೊಯ್ದರು.

ಪೊಲೀಸ್ ತನಿಖೆ

ಲೀಲಾ ಶರ್ಮಾ ಅವರ ಮಗ ಕೃಷ್ಣ ಶರ್ಮಾ ದೂರು ದಾಖಲಿಸಿದ ಆಧಾರದ ಮೇಲೆ ಪೊಲೀಸರು ವಿಜಯ್ ಅಗರ್ವಾಲ್, ಅವರ ಪತ್ನಿ ಮತ್ತು ಇನ್ನೂ 15 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇಲ್ಲಿಯವರೆಗೆ ನಾಲ್ವರು ಉದ್ಯೋಗಿಗಳನ್ನು ಬಂಧಿಸಲಾಗಿದೆ.

ಲೀಲಾ ಶರ್ಮಾ ಮತ್ತು ಅವರ ಕುಟುಂಬದವರು ಇಂತಹ ಘಟನೆಯಲ್ಲಿ ಭಾಗಿಯಾಗಿರುವುದು ಇದೇ ಮೊದಲಲ್ಲ ಎನ್ನಲಾಗಿದೆ. ಜನವರಿ 16 ರಂದು, ತಮ್ಮ ಪ್ಲಾಟ್ ಅನ್ನು ಸ್ವಚ್ಛಗೊಳಿಸುತ್ತಿದ್ದ ಆಸ್ತಿ ಮಾಲೀಕನ ಮೇಲೆ ಕಲ್ಲು ಹೊಡೆದು ನಾಲ್ವರಿಗೆ ಗಾಯಗಳಾಗಿದ್ದವು ಎಂದು ಅವರ ಮೇಲೆ ಆರೋಪ ಹೊರಿಸಲಾಗಿತ್ತು.

 

 

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read