ಅನಿರೀಕ್ಷಿತ ಅತಿಥಿ: ಸೇನಾ ಶಾಲೆಯಲ್ಲಿ ಆನೆ ವಿಹಾರದ ವಿಡಿಯೊ ವೈರಲ್ | Watch

ಗುವಾಹಟಿಯ ನರೇಂಗಿಯಲ್ಲಿರುವ ಸೇನಾ ಶಾಲೆಯೊಂದರಲ್ಲಿ ಇತ್ತೀಚೆಗೆ ಅಚ್ಚರಿಯ ಘಟನೆಯೊಂದು ನಡೆದಿದೆ. ಆನೆಯೊಂದು ಶಾಲೆಗೆ ನುಗ್ಗಿ ತರಗತಿಗಳ ಹೊರಗೆ ಆರಾಮವಾಗಿ ವಿಹರಿಸಿದೆ. ಈ ಹೃದಯಸ್ಪರ್ಶಿ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ವಿಡಿಯೊವನ್ನು ಹಂಚಿಕೊಂಡಿರುವ ನೆಟ್ಟಿಗರೊಬ್ಬರು, ಈ ಆನೆಯು ಸೇನಾ ಕ್ಯಾಂಪ್‌ಗೆ ಆಗಾಗ ಬರುವ ಪರಿಚಿತ ಅತಿಥಿ. ಅದು ನಿಯಮಿತವಾಗಿ ಇಲ್ಲಿ ಅಡ್ಡಾಡುತ್ತಿರುತ್ತದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಸೇನಾ ಸಿಬ್ಬಂದಿ ಆನೆಗಾಗಿ ಲಂಗರ್‌ನಲ್ಲಿ ಪ್ರತ್ಯೇಕವಾಗಿ ಆಹಾರವನ್ನೂ ಇಡುತ್ತಾರೆ. ಆನೆ ಸಂತೋಷದಿಂದ ಅದನ್ನು ತಿನ್ನುತ್ತದೆ. ಅಲ್ಲದೆ, ಕ್ಯಾಂಪ್‌ನೊಳಗಿನ ಕೊಳದಲ್ಲಿ ಆನೆ ಆಗಾಗ್ಗೆ ಸ್ನಾನ ಮಾಡುತ್ತದೆ ಮತ್ತು ಆಟವಾಡುತ್ತದೆ ಎಂದು ಅವರು ಹೇಳಿದ್ದಾರೆ.

ವೈರಲ್ ಆಗಿರುವ ಈ ವಿಡಿಯೊದಲ್ಲಿ ಆನೆಯು ನರೇಂಗಿಯ ಸೇನಾ ಶಾಲೆಯ ತರಗತಿಗಳ ಹೊರಗೆ ನಿಧಾನವಾಗಿ ಹೆಜ್ಜೆ ಹಾಕುತ್ತಿರುವುದು ಕಂಡುಬರುತ್ತದೆ. ನಂತರ ಸೈನಿಕರು ಆನೆಯನ್ನು ಶಾಲಾ ಆವರಣದಿಂದ ಸುರಕ್ಷಿತವಾಗಿ ಕಾಡಿನ ಕಡೆಗೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಅಚ್ಚರಿಯ ಮತ್ತು ಮುದ್ದಾದ ದೃಶ್ಯವನ್ನು ಕಂಡ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read