ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಹಿಂದೆ ಹಲವು ಅನುಮಾನ

ಬೆಂಗಳೂರು: ನಟ, ನಿರ್ದೇಶಕ ಗುರುಪ್ರಸಾದ್ ಮಾದನಾಯನಹಳ್ಳಿಯ ಅಪಾರ್ಟ್ ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮೂರು ದಿನಗಳ ಹಿಂದೆಯೇ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.  1972ರಂದು ನವೆಂಬರ್ 2ರಂದು ರಾಮನಗರ ಜಿಲ್ಲೆ ಕನಕಪುರದಲ್ಲಿ ಜನಿಸಿದ್ದ ಗುರುಪ್ರಸಾದ್ ಇತ್ತೀಚೆಗೆ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

2006ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದ ಗುರುಪ್ರಸಾದ್ ಮಠ ಸಿನಿಮಾ ನಿರ್ದೇಶನ ಮಾಡುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ‘ಮಠ’, ‘ಎದ್ದೇಳು ಮಂಜುನಾಥ’, ‘ರಂಗನಾಯಕ’, ‘ಡೈರೆಕ್ಟರ್ ಸ್ಪೆಷಲ್’, ‘ಎರಡನೇ ಸಲ’, ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಅಲ್ಲದೆ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಗುರುಪ್ರಸಾದ್ ನಟಿಸಿದ್ದರು. ನಿರ್ದೇಶನ, ಸಂಭಾಷಣೆ, ನಟನೆಯಲ್ಲಿಯೂ ಅವರು ಮಿಂಚಿದ್ದರು. ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದರು. ‘ ಬಿಗ್ ಬಾಸ್’ ಸೀಸನ್ 2ರಲ್ಲಿ ಸ್ಪರ್ಧಿಯಾಗಿದ್ದರು.

ಚೆಕ್ ಬೌನ್ಸ್ ಪ್ರಕರಣ ಒಂದರಲ್ಲಿ ಅವರನ್ನು ಕಳೆದ ವರ್ಷ ಪೊಲೀಸರು ವರ್ಷಕ್ಕೆ ಪಡೆದುಕೊಂಡಿದ್ದರು. ಚೆಕ್ ಬೌನ್ಸ್ ಪ್ರಕರಣದಲ್ಲಿ ಕೋರ್ಟ್ ಕಚೇರಿಗೆ ಅಲೆಯುತ್ತಿದ್ದರು. ಇದರ ನಡುವೆ ಜಯನಗರದಲ್ಲಿಯೂ ಪುಸ್ತಕ ಖರೀದಿ ಮಾಡಿ ಹಣ ಕೊಟ್ಟಿಲ್ಲವೆಂದು ದೂರು ದಾಖಲಾಗಿತ್ತು. ಅವರ ಆತ್ಮಹತ್ಯೆ ಹಿಂದೆ ಪೊಲೀಸರಿಗೆ ಹಲವು ಅನುಮಾನಗಳಿದ್ದು ಎಲ್ಲಾ ಆಯಾಮಗಳಲ್ಲಿಯೂ ತನಿಖೆ ಕೈಗೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read