ತಾಯಿ ಕಣ್ಣೆದುರಲ್ಲೇ ಯುವತಿಗೆ ಇರಿದು ಭೀಕರ ಹತ್ಯೆ; ಘನಘೋರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ

ಇತ್ತೀಚಿಗೆ ದೆಹಲಿಯಲ್ಲಿ 16 ವರ್ಷದ ಬಾಲಕಿಯನ್ನ ಪ್ರಿಯಕರ ಸಾರ್ವಜನಿಕವಾಗಿ ಚಾಕು ಇರಿದು ಭೀಕರವಾಗಿ ಹತ್ಯೆ ಮಾಡಿದ ಘಟನೆಯನ್ನೇ ಹೋಲುವ ಮತ್ತೊಂದು ಭಯಾನಕ ಹತ್ಯೆ ಪ್ರಕರಣ ಗುರುಗ್ರಾಮದಲ್ಲಿ ನಡೆದಿದೆ.

ಪಾಲಮ್ ವಿಹಾರ್‌ನಲ್ಲಿ ಹಾಡಹಗಲೇ ಯುವಕನೊಬ್ಬ ಯುವತಿಯನ್ನು ಚಾಕುವಿನಿಂದ ಇರಿದು ಕೊಂದ ಆಘಾತಕಾರಿ ಕೊಲೆ ಪ್ರಕರಣ ನಡೆದಿದೆ. 19 ವರ್ಷ ವಯಸ್ಸಿನ ಯುವತಿಯನ್ನ ಆಕೆಯ ತಾಯಿಯ ಕಣ್ಣೆದುರೇ ಕೊಲೆ ಮಾಡಲಾಗಿದೆ.

ಈ ವೇಳೆ ಆರೋಪಿಯನ್ನ ಸಂತ್ರಸ್ತೆಯ ತಾಯಿ ತಡೆಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಪರಾಧ ನಡೆದ ಸ್ಥಳದಲ್ಲಿ ಸೇರಿದ್ದ ಜನ ಸುಮ್ಮನೆ ನೋಡುತ್ತಾ ನಿಂತಿದ್ದರೇ ಹೊರತು ಯಾರೊಬ್ಬರೂ ಆರೋಪಿಯನ್ನ ತಡೆಯಲು ಯತ್ನಿಸಲಿಲ್ಲ.

ರಾಜ್‌ಕುಮಾರ್ (23) ಎಂದು ಗುರುತಿಸಲಾದ ಆರೋಪಿಯನ್ನ ಸಂತ್ರಸ್ತೆಯ ಸಂಬಂಧಿಕರು ಕೊನೆಗೂ ಹಿಡಿದು ಪಾಲಂ ವಿಹಾರ್ ಪೊಲೀಸರಿಗೆ ಒಪ್ಪಿಸಿದರು.

ಸಂತ್ರಸ್ತೆ ಆರೋಪಿಯನ್ನು ಮದುವೆಯಾಗಲು ನಿರಾಕರಿಸಿದ್ದಳು ಎಂಬ ಕಾರಣಕ್ಕಾಗಿ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ. ನಾಲ್ಕು ತಿಂಗಳ ಹಿಂದೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು, ಆದರೆ ಕೆಲವು ದಿನಗಳ ಹಿಂದೆ ಮದುವೆಯನ್ನು ರದ್ದುಗೊಳಿಸಲಾಗಿತು ಎನ್ನಲಾಗಿದೆ.

ಕೊಲೆಯ ಸಂಪೂರ್ಣ ದೃಶ್ಯವು ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹುಡುಗಿ ವೃತ್ತಿಯಲ್ಲಿ ಮನೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಉತ್ತರ ಪ್ರದೇಶದ ಬದೌನ್‌ ಮೂಲದವರು.

ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸ್ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅಪರಾಧಕ್ಕೆ ಬಳಸಿದ ಚಾಕು, ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

https://twitter.com/gaurav1307kumar/status/1678336817446223872?ref_src=twsrc%5Etfw%7Ctwcamp%5Etweetembed%7Ctwterm%5E1678336817446223872%7Ctwgr%5E7a26fc6997629207e4dad93574e93244e0e7479d%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fgurugramshockerjiltedloverstabs19yroldtodeathinfrontofhermotherinbroaddaylightcctvcapturesmurder-newsid-n517131424

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read