SHOCKING: ಊಟ ಕೊಡಲಿಲ್ಲ ಎಂದು ಸಂಗಾತಿ ಉಸಿರು ನಿಲ್ಲಿಸಿದ ವ್ಯಕ್ತಿ ಅರೆಸ್ಟ್

ಗುರುಗ್ರಾಮ: ಆಹಾರ ನೀಡಲು ನಿರಾಕರಿಸಿದ ಕಾರಣಕ್ಕಾಗಿ ವ್ಯಕ್ತಿಯೊಬ್ಬ ತನ್ನ ಸಂಗಾತಿಯನ್ನು(Live-in-partner)  ಕೊಲೆ ಮಾಡಿದ್ದಾನೆ. ಬೆಲ್ಟ್‌ ಮತ್ತು ಇತರೆ ವಸ್ತುವಿನಿಂದ ಕೊಲೆ ಮಾಡಿದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಾಲಮ್ ವಿಹಾರ್ ಪ್ರದೇಶದ ಚೌಮಾ ಗ್ರಾಮದಲ್ಲಿ ಮಾರ್ಚ್ 13 ರಂದು ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಬಿಹಾರ ಮೂಲದ ಲಲ್ಲನ್ ಯಾದವ್(35) ಎಂದು ಗುರುತಿಸಲಾಗಿದೆ. ದೆಹಲಿಯಲ್ಲಿ ಬಂಧಿತನಾಗಿದ್ದ ಲಲ್ಲನ್ ಕಳೆದ 6-7 ತಿಂಗಳಿಂದ ಅಂಜಲಿ(32) ಎಂಬಾಕೆಯೊಂದಿಗೆ ನೆಲೆಸಿದ್ದ ಎಂದು ಪಾಲಂ ವಿಹಾರ್ ಎಸ್‌ಹೆಚ್‌ಒ ಕರಮ್‌ಜೀತ್ ಸಿಂಗ್ ಹೇಳಿದರು

ಲಲ್ಲನ್ ಮದ್ಯವ್ಯಸನಿಯಾಗಿದ್ದು, ಪ್ರತಿದಿನ ಮದ್ಯಪಾನ ಮಾಡುತ್ತಿದ್ದ. ಅವನು ಆಗಾಗ್ಗೆ ಮಹಿಳೆಯೊಂದಿಗೆ ಜಗಳವಾಡುತ್ತಿದ್ದ. ಬುಧವಾರ ಸಂಜೆ ಮನೆಗೆ ಹಿಂತಿರುಗಿ ಆಹಾರಕ್ಕಾಗಿ ಕೇಳಿದ್ದು, ಆದರೆ ಅವಳು ನಿರಾಕರಿಸಿದಾಗ ಕೊಲೆ ಮಾಡಿದ್ದಾನೆ. ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದು, ಪಾಲಂ ವಿಹಾರ್‌ನ ಚೌಮಾ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ವಾಸಿಸುತ್ತಿದ್ದರು ಎಂದು ಹೇಳಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read