ಅಹಮದಾಬಾದ್: ಗುಜರಾತ್ ನ ಪ್ರಮುಖ ದಿನ ಪತ್ರಿಕೆ ಗುಜರಾತ್ ಸಮಾಚಾರ್ ಮಾಲೀಕರೊಬ್ಬರನ್ನು ಜಾರಿ ನಿರ್ದೇಶನಾಲಯ-ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಗುಜರಾತ್ ಸಮಾಚಾರ್ ನ ಮಾಲೀಕರಲ್ಲಿ ಒಬ್ಬರಾದ ಬಾಹುಬಲಿ ಶಾ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಹಳೇಯ ಪ್ರಕರಣವೊಂದರಲ್ಲಿ ಶಾ ಅವರನ್ನು ಬಂಧಿಸಲಾಗಿದೆ.
ಬಾಹುಬಲಿ ಶಾ ಬಂಧನದ ಬೆನ್ನಲ್ಲೇ ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ನಮ್ಮನ್ನು ಗುರಿಯಾಗಿಸಲಾಗುತ್ತಿದೆ ಎಂದು ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಶ್ರೇಯಂತ್ ಶಾ ಕಿಡಿಕಾರಿದ್ದಾರೆ.
ಐಟಿ ದಾಳಿಯಾದ ಕೆಲವೇ ಗಂಟೆಗಳಲ್ಲಿ ಬಾಹುಬಲಿ ಶಾ ಅವರನ್ನು ಇಡಿ ಬಂಧಿಸಿದೆ.