ಮೆಹ್ಸಾನಾ: ಸೋಮವಾರ ಸಂಜೆ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ಖಾಸಗಿ ವಾಯುಯಾನ ಅಕಾಡೆಮಿಗೆ ಸೇರಿದ ತರಬೇತಿ ವಿಮಾನ ಅಪಘಾತಕ್ಕೀಡಾಗಿ ಮಹಿಳಾ ತರಬೇತಿ ಪೈಲಟ್ ಗಾಯಗೊಂಡಿದ್ದಾರೆ.
ಕೆಲವು ತಾಂತ್ರಿಕ ಕಾರಣಗಳಿಂದಾಗಿ ಸಿಂಗಲ್ ಎಂಜಿನ್ ವಿಮಾನವು ಮೆಹ್ಸಾನಾ ಪಟ್ಟಣದ ಬಳಿಯ ಉಚಾರ್ಪಿ ಗ್ರಾಮದಲ್ಲಿ ತೆರೆದ ಮೈದಾನಕ್ಕೆ ಡಿಕ್ಕಿ ಹೊಡೆದಿದೆ ಎಂದು ಮೆಹ್ಸಾನಾ ತಾಲೂಕು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಡಿ.ಜಿ. ಬದ್ವಾ ತಿಳಿಸಿದ್ದಾರೆ.
“ಮಹಿಳಾ ತರಬೇತಿ ಪೈಲಟ್‌ನೊಂದಿಗೆ ಮೆಹ್ಸಾನಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ನಂತರ, ವಾಯುಯಾನ ಅಕಾಡೆಮಿಯ ತರಬೇತಿ ವಿಮಾನವು ಉಚಾರ್ಪಿಯ ಮೈದಾನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ತರಬೇತಿ ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಇನ್ಸ್ ಪೆಕ್ಟರ್ ಹೇಳಿದ್ದಾರೆ.
ಘಟನೆಯ ಕುರಿತು ಹೆಚ್ಚಿನ ತನಿಖೆಯ ನಂತರ ವಿಮಾನ ನಿಲ್ದಾಣ ಮತ್ತು ವಾಯುಯಾನ ಅಧಿಕಾರಿಗಳಿಗೆ ಅಪಘಾತದ ಬಗ್ಗೆ ತಿಳಿಸಲಾಗಿದೆ ಎಂದು ಬದ್ವಾ ಹೇಳಿದರು.